Skip to main content


ರೈತರಿಗೆ ಸಿಹಿ ಸುದ್ದಿ: 53 ಸಾವಿರ ಕೋಟಿಯವರೆಗೂ ಸಾಲಮನ್ನಾ ಘೋಷಣೆಗೆ ಸಿಎಂ ಸಿದ್ಧತೆ

ರೈತರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿರುವ ಸಿಎಂ ಕುಮಾರಸ್ವಾಮಿ ಅವರು ಸಮ್ಮಿಶ್ರದ ಸರ್ಕಾರದ ಮೊದಲ ಬಜೆಟ್​ನಲ್ಲಿಯೇ 53 ಸಾವಿರ ಕೋಟಿ ರೈತರ ಸಾಲ ಮನ್ನಾ ಘೋಷಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ಜುಲೈ 5 ರಂದು ಗುರುವಾರ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಲು ಸಿಎಂ ಮುಂದಾಗಿದ್ದು, ಸಾಲಮನ್ನಾ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಲಿದ್ದಾರೆ. ರೈತರ ಸಾಲಮನ್ನಾ ಕುರಿತಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಹಣಕಾಸು ತಜ್ಞರು, ಬ್ಯಾಂಕ್ ಮುಖ್ಯಸ್ಥರ ಜತೆ ಚರ್ಚಿಸಿ ಫಾರ್ಮುಲಾ ರೆಡಿ ಮಾಡಿದ್ದಾರೆ ಎನ್ನಲಾಗಿದೆ.

ಸಹಕಾರ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ 2009 ಏಪ್ರಿಲ್ ನಿಂದ 2017 ಡಿಸೆಂಬರ್ ವರೆಗೂ ರೈತರು ಪಡೆದಿದ್ದ ಸಾಲವನ್ನು ಮನ್ನಾ ಮಾಡಲಿದ್ದಾರೆ ಎನ್ನಲಾಗಿದೆ. ರಾಜ್ಯದ ರೈತರಿಗೆ ಕೊಟ್ಟಿದ್ದ ಭರವಸೆ ಕಾರ್ಯರೂಪಕ್ಕೆ ತರಲು ಸಿಎಂ ಸಿದ್ಧರಾಗಿದ್ದಾರೆ.   

short by Pawan / more at News18

Comments