Skip to main content


ನೆನಪಿನ ಶಕ್ತಿ ಹೆಚ್ಚಿಸುವ 5 ನಿಮಿಷದ ಯೋಗಾಸನ

ಯೋಗ ಅಭ್ಯಾಸದಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಆಕರ್ಷಕ ದೇಹದ ಆಕೃತಿಯನ್ನು ಪಡೆಯುವುದರ ಜತೆಗೆ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸಬಹುದಾಗಿದೆ. 

ಬಸ್ಕಿ ಹೊಡೆಯುವುದು: ವಿದ್ಯಾರ್ಥಿಗಳು ಏನಾದರೂ ತಪ್ಪು ಮಾಡಿದರೆ ಶಿಕ್ಷಕರು ಬಸ್ಕಿ ಶಿಕ್ಷೆ ನೀಡುತ್ತಾರೆ. ಆದರೆ ಅದು ಶಿಕ್ಷೆಯ ಬದಲಿಗೆ ಮಕ್ಕಳ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅತ್ಯುತ್ತಮವಾದ ವ್ಯಾಯಾಮವಾಗಿದೆ. ದಿನಾ ಬಸ್ಕಿ ಹೊಡೆಯುವುದರಿಂದ ಏಕಾಗ್ರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುವುದು. ಬಸ್ಕಿಯಲ್ಲಿ ಕೂರುವಾಗ ಉಸಿರನ್ನು ಎಳೆದುಕೊಂಡು ಎದ್ದೇಳುವಾಗ ಬಿಡಬೇಕು. 

ಮುದ್ರೆ 
ಈಗ ಲೆಫ್ಟ್‌ ರೈಟ್ ಅಂತ ವಾಕ್‌ ಮಾಡಿ. ಈಗ ಕುರ್ಚಿಯಲ್ಲಿ ಕುಳಿತು ಒಂದು ಕಾಲನ್ನು ಮತ್ತೊಂದು ಕಾಲಿನ ಮೇಲೆ ಇಟ್ಟು ಒಂದು ಕೈಯಿಂದ ಆ ಕಾಲಿನ ಮಣಿಗಂಟನ್ನು ಹಿಡಿದು, ಮತ್ತೊಂದು ಕೈಯಿಂದ ಪಾದವನ್ನು ಎಳೆಯಿರಿ, ಆಗ ತೊಡೆ ಸ್ಟ್ರೆಚ್‌ ಆಗಬೇಕು. ಅದೇ ರೀತಿ ಮತ್ತೊಂದು ಕಾಲನ್ನು ಮಾಡಿ. ಈಗ ಕಿರುಬೆರಳು, ಉಂಗುರ ಬೆರಳನ್ನು ಹೆಬ್ಬರಳಿನಿಂದ ಪ್ರೆಸ್‌ ಮಾಡಿ ದೀರ್ಘವಾಗಿ ಉಸಿರಾಡಿ. ಇಷ್ಟು ಮಾಡಿದರೆ ಸಾಕು ಜ್ಞಾಪಕ ಶಕ್ತಿ ಹೆಚ್ಚುವುದು.    

short by Pawan / more at Vijayakarnataka

Comments