Skip to main content


ಜೂನ್ 6ಕ್ಕೆ ರಕ್ಷಿತ್ ಶೆಟ್ಟಿ ಕಡೆಯಿಂದ ಸ್ಪೆಷಲ್ ಗಿಫ್ಟ್ ಇದೆಯಂತೆ..!

ಅಂದ್ಹಾಗೆ, ಜೂನ್ 6 ರಕ್ಷಿತ್ ಶೆಟ್ಟಿಯ ಬರ್ತಡೇ. 35ನೇ ವಸಂತಕ್ಕೆ ಕಾಲಿಡಲಿರುವ ರಕ್ಷಿತ್ ಗೆ ಸ್ಯಾಂಡಲ್ ವುಡ್ ಮಂದಿ ಸರ್ಪ್ರೈಸ್ ನೀಡಲು ತಯಾರಾಗುತ್ತಿದ್ದಾರೆ. ಹೌದು, ರಕ್ಷಿತ್ ಶೆಟ್ಟಿಯ ಹುಟ್ಟುಹಬ್ಬದ ಪ್ರಯುಕ್ತ 'ಅವನೇ ಶ್ರೀಮನ್ನಾರಾಯಣ' ಮತ್ತು 'ಚಾರ್ಲಿ' ಚಿತ್ರಗಳ ಪೋಸ್ಟರ್ ಅನಾವರಣ ಮಾಡಲಾಗುವುದಂತೆ. '777 ಚಾರ್ಲಿ' ಸಿನಿಮಾ ಶ್ವಾನ ಮತ್ತು ಮನುಷ್ಯನ ಬಾಂಡಿಂಗ್ ಹೇಳುವಂತಹ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಶ್ವಾನದ ಹೆಸರು ಚಾರ್ಲಿ ಆಗಿದ್ದು, ಶ್ವಾನದ ಲೈಸನ್ಸ್ ನಂಬರ್ 777 ಅಂತೆ. ಹೀಗಾಗಿ ಚಿತ್ರಕ್ಕೆ '777 ಚಾರ್ಲಿ' ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಶಾನ್ವಿ ಶ್ರೀವತ್ಸವ್ ನಟಿಸಿದ್ದಾರೆ. ರಕ್ಷಿತ್ ಸಿನಿಮಾದಲ್ಲಿ ಐದು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರವನ್ನು ಅವರು ಮಾಡಿದ್ದಾರೆ.       

short by Pawan / more at Filmibeat

Comments