Skip to main content


600 ಜ್ಯೋತಿರ್ವರ್ಷ ದೂರದ ಗ್ರಹ ಪತ್ತೆ ಮಾಡಿದ ಭಾರತೀಯ ವಿಜ್ಞಾನಿಗಳು

ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (ಪಿಆರ್‌ಎಲ್) ವಿಜ್ಞಾನಿಗಳ ತಂಡವು ಶನಿಗ್ರಹಕ್ಕಿಂತ ಸ್ವಲ್ಪ ಚಿಕ್ಕದಾದ ಹಾಗೂ ನೆಪ್ಚೂನ್‌ಗಿಂತ ದೊಡ್ಡ ಗಾತ್ರದ ನೂತನ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ. 

ಇದು ಭೂಮಿ ದ್ರವ್ಯರಾಶಿಯ 27 ಪಟ್ಟು ಮತ್ತು ಭೂಮಿಯ ತ್ರಿಜ್ಯಕ್ಕಿಂತ ಆರು ಪಟ್ಟು ಹೆಚ್ಚು ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಈ ಗ್ರಹ ಸೂರ್ಯನಂತಹ ನಕ್ಷತ್ರವೊಂದರ ಸುತ್ತ ಸುತ್ತುತ್ತಿದ್ದು, ಭೂಮಿಯಿಂದ ಸುಮಾರು 600 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ಹೇಳಲಾಗುತ್ತಿದೆ.

ಮೌಂಟ್ ಅಬುವಿನಲ್ಲಿರುವ ಪಿಆರ್‌ಎಲ್‌ನ ಗುರುಶಿಖರ್ ವೀಕ್ಷಣಾಲಯದಲ್ಲಿ 1.2 ಮೀ. ದೂರದರ್ಶಕದೊಂದಿಗೆ ಸಂಯೋಜಿತವಾಗಿರುವ ಅಡ್ವಾನ್ಸ್ ರೇಡಿಯಲ್-ವೆಲಾಸಿಟಿ ಅಬು-ಸ್ಕೈ ಸರ್ಚ್ (ಪಿಎಆರ್‌ಎಎಸ್) ಸ್ಪೆಕ್ಟ್ರೋಗ್ರಾಫ್ ಬಳಸಿಕೊಂಡು ಈ ಗ್ರಹವನ್ನು ಪತ್ತೆಮಾಡಲಾಗಿದೆ. 
ಈ ಗ್ರಹಕ್ಕೆ ವಿಜ್ಞಾನಿಗಳು EPIC 211945201b or K2-236b ಎಂದು ಹೆಸರಿಟ್ಟಿದ್ದಾರೆ. ಈ ಗ್ರಹ ಸೂರ್ಯನನ್ನು ಒಂದು ಬಾರಿ ಸುತ್ತಲು 19.5 ದಿನ ತೆಗೆದುಕೊಳ್ಳುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.     

short by Pawan / more at Vijayakarnataka

Comments