Skip to main content


ಮೊದಲ 6 ಓವರ್​ನಲ್ಲಿ ಆತ ಕ್ರೀಸ್​ನಲ್ಲಿದ್ದರೆ ಬೌಂಡರಿ, ಸಿಕ್ಸರ್​ಗಳ ಸುರಿಮಳೆ !: ಸಚಿನ್​ ತೆಂಡೊಲ್ಕರ್​

ವಾಟ್​ ದಿ ಡಕ್​ ಕಾರ್ಯಕ್ರಮದಲ್ಲಿ ವೀರೂ ಜೊತೆಗಿನ ತಮ್ಮ ಕ್ರಿಕೆಟ್​ ಜೀವನದ ಅನುಭವವನ್ನು ಹಂಚಿಕೊಂಡ ಸಚಿನ್​, ಸೆಹ್ವಾಗ್‌ ಆರಂಭದ ದಿನಗಳಲ್ಲಿ ನನ್ನ ಜೊತೆ ಮಾತನಾಡುತ್ತಿರಲಿಲ್ಲ, ಮೈದಾನದೊಳಗೆ ಇಬ್ಬರು ಬ್ಯಾಟಿಂಗ್​ ನಡೆಸುವಾಗ ಒಬ್ಬರೊನ್ನೊಬ್ಬರು ಮಾತನಾಡದಿರುವುದು ಪಂದ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ನಾನೆ ಆತನನ್ನು ಮಾತನಾಡಿಸುತ್ತದ್ದೆ ಎಂದು ಹೇಳಿಕೊಂಡಿದ್ದಾರೆ.

ಮತ್ತೊಂದು ಘಟನೆ ನೆನಪಿಸಿಕೊಂಡ ಸಚಿನ್​, ಒಂದು ದಿನ ಪಂದದ ಆರಂಭಕ್ಕೂ ಮುನ್ನ ಚಿಕನ್, ಫಿಶ್​ ಏನಾದರೂ ಆರ್ಡರ್​ ಮಾಡ್ಲಾ ಎಂದು ಕೇಳದ್ರಂತೆ, ಆಗ ವೀರೂ, ಚಿಕನ್​ ತಿಂದರೆ ನಾನು ದಪ್ಪ ಆಗ್ಬಿಡ್ತೀನಿ ಎಂದು ನಮ್ಮ ಮನೆಯಲ್ಲಿ ಹೇಳಿದ್ದಾರೆ ಎಂದು ತಿಳಿಸಿದ್ದರಂತೆ. ಜೊತೆಗೆ ವೀರೂ ಬ್ಯಾಟಿಂಗ್​ ಇಳಿದರೆ ಮೊದಲ 6 ಓವರ್​ಗಳಲ್ಲಿ ಅವರನ್ನು ಕಂಟ್ರೋಲ್​ ಮಾಡಲು ಬೌಲರ್​ಗಳಿಗೆ ಅಸಾಧ್ಯದ ಮಾತಾಗಿತ್ತು ಎಂದು ಸಚಿನ್​ ಇದೇ ವೇಳೆ ಅಭಿಪ್ರಾಯ ಪಟ್ಟಿದ್ದಾರೆ.​ 

ಇನ್ನು ಇದೇ ಕಾರ್ಯಕ್ರಮದಲ್ಲಿ ಸಚಿನ್​ ಜೊತೆ ಭಾಗವಹಿಸಿದ್ದ ಸೆಹ್ವಾಗ್​ ಕೂಡ ತಮ್ಮ ಹಾಗೂ ಸಚಿನ್​ ಒಡನಾಟದ ಬಗ್ಗೆ ತಿಳಿಸಿದ್ದು, ವೀರೂ ಸಚಿನ್​ರನ್ನ 1992 ರ ವಿಶ್ವಕಪ್​ನಿಂದ ಟಿವಿಯಲ್ಲಿ ನೋಡುತ್ತಿದ್ದರಂತೆ. ಅಂದಿನಿಂದಲೇ ತಾವೂ ಸಚಿನ್​ ಅವರ ಆಟವನ್ನು ಅನುಕರಣೆ ಮಾಡುತ್ತಿದ್ದೆ, ಆದರೆ, ತಮ್ಮ ಜೀವನದಲ್ಲಿ ಸಚಿನ್​ ಜೊತೆ ಆಡಿದ್ದೇ ನನ್ನ ಭಾಗ್ಯ ಎಂದು ಹೇಳಿಕೊಂಡಿದ್ದಾರೆ.  

short by Pawan / more at Eenadu India

Comments