Skip to main content


ಜೆಡಿಎಸ್ ನ 8 - 9 ಶಾಸಕರಿಗೆ ಮಾತ್ರ ಮಂತ್ರಿ ಸ್ಥಾನ..?

ಸಂಭವನೀಯ ಅಸಮಾಧಾನವನ್ನು ತಡೆಗಟ್ಟುವ ಉದ್ದೇಶದಿಂದ ಜೆಡಿಎಸ್ ತನ್ನ ಪಾಲಿಗೆ ಬಂದಿರುವ ಹನ್ನೊಂದು ಸಚಿವ ಸ್ಥಾನಗಳ ಪೈಕಿ ಎರಡು ಅಥವಾ ಮೂರನ್ನು ಉಳಿಸಿಕೊಂಡು ಇನ್ನುಳಿ ದವುಗಳನ್ನು ಭರ್ತಿ ಮಾಡಲು ಮುಂದಾಗಿದೆ. ಅಲ್ಲದೆ, ಮೊದಲ ಹಂತದಲ್ಲಿ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದು ಬೇಡ ಎಂಬ ಅಭಿಪ್ರಾಯವನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೊಂದಿದ್ದಾರೆ ಎನ್ನಲಾಗಿದ್ದು, ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಮತ್ತು ಬಿ.ಎಂ.ಫಾರೂಕ್ ಅವರಿಗೆ ಸಚಿವ ಸ್ಥಾನ ಅನುಮಾನವಾಗಿದೆ.

ಇನ್ನು ಬುಧವಾರ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಷಕ್ಕೆ ಲಭ್ಯವಾಗಿರುವ 11 ಖಾತೆಗಳನ್ನು ಹಂಚಿಕೆ ಮಾಡದೆ 2 - 3 ಖಾತೆಗಳನ್ನು ಉಳಿಸಿಕೊಂಡು 8 - 9 ಮಂದಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚಿಸಲಾಗಿದೆ. ಚರ್ಚೆಗೆ ಗ್ರಾಸವಾಗಿರುವ ಜೆಡಿಎಸ್
ಮುಖಂಡ ಎಚ್.ಡಿ.ರೇವಣ್ಣ ಇಂಧನ ಮತ್ತು ಲೋಕೋಪಯೋಗಿ ಇಲಾಖೆ ಮೇಲೆ ಕಣ್ಣಿಟ್ಟಿರುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಎರಡು ಖಾತೆಗಳನ್ನು ರೇವಣ್ಣ ನೀಡುವ ಬಗ್ಗೆ ಚರ್ಚೆ ನಡೆದಿದೆಯಾದರೂ, ಸಭೆಯಲ್ಲಿ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಪಕ್ಷದಲ್ಲಿ ಅಸಮಾಧಾನ ಹೋಗಲಾಡಿಸಲು ರೇವಣ್ಣಗೆ ಒಂದೇ ಖಾತೆ ನೀಡುವ ಕುರಿತು ಚರ್ಚಿಸಲಾಯಿತು ಎಂದು ಹೇಳಲಾಗಿದೆ.     

short by Pawan / more at Suvarna News

Comments