Skip to main content


ಇದೆಂಥ ವಿಪರ್ಯಾಸ, ವಿದ್ಯಾರ್ಹತೆ 8 ನೇ ತರಗತಿ, ಖಾತೆ-ಉನ್ನತ ಶಿಕ್ಷಣ!

"ನೋಡಿ ಸ್ವಾಮಿ, ವಿಪರ್ಯಾಸ ಅಂದ್ರೆ ಇದೇ! 8 ನೇ ತರಗತಿ ಪಾಸು ಮಾಡಿದ ವ್ಯಕ್ತಿಗೆ ಉನ್ನತ ಶಿಕ್ಷಣ ಖಾತೆಯಂತೆ! ಇದೆಂಥ ನ್ಯಾಯ" ಎಂದು ಟ್ವಿಟ್ಟರ್ ನಲ್ಲಿ ಹಲವರು ಅಲವತ್ತುಕೊಂಡಿದ್ದಾರೆ!

ಖಾತೆ ಹಂಚಿಕೆಯ ಸಮಯದಲ್ಲಿ ಅರ್ಹತೆ, ಅನುಭವಕ್ಕಿಂತ ಹೆಚ್ಚಾಗಿ ಜಾತಿಯೇ ಪಾರಮ್ಯ ಮೆರೆದಿದೆಯೇನೋ ಎಂಬ ಅನುಮಾನ ಕಾಡುತ್ತಿದೆ! ಅದಕ್ಕೆ ಸಾಕ್ಷಿ ಎಂಬಂತೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಲಭಿಸಿದೆ! ಅಚ್ಚರಿ ಎಂದರೆ ಅವರು ಓದಿದ್ದು ಕೇವಲ ಎಂಟನೇ ತರಗತಿವರೆಗೆ!

ಅಷ್ಟಕ್ಕೂ ಜಿಟಿಡಿ ಈ ಖಾತೆಯನ್ನು ಬಯಸಿದ್ದರಾ? ಗೊತ್ತಿಲ್ಲ. ಆದರೆ ಕೇವಲ 8 ನೇ ತರಗತಿಯನ್ನಷ್ಟೇ ಓದಿರುವ ವ್ಯಕ್ತಿಗೆ ಉನ್ನತ ಶಿಕ್ಷಣದಂಥ ಖಾತೆಯನ್ನು ನೀಡುವುದು ಎಷ್ಟು ಸರಿ ಎಂಬುದು ಇದೀಗ ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ವಿಷಯ. ಪ್ರತಿಷ್ಠೆಯ ಕಣವಾಗಿದ್ದ ಚಾಮುಂಡೇಶ್ವರಿಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿ, ಭರ್ಜರಿ ಜಯ ಸಾಧಿಸುವ ಮೂಲಕ ಜೆಡಿಎಸ್ ತೂಕ ಹೆಚ್ಚಿಸಿದ್ದ ಜಿಟಿಡಿ ಅವರ ಋಣಸಂದಾಯಕ್ಕೆ ಎಚ್ ಡಿ ಕುಮಾರಸ್ವಾಮಿ ನೀಡಿದ ಉಡುಗೊರೆಯಾ ಇದು? ಎಂಬ ಪ್ರಶ್ನೆಯೂ ಎದ್ದಿದೆ!   

short by Pawan / more at Oneindia

Comments