Skip to main content


ನಟಸಾರ್ವಭೌಮನಿಗೆ ಹೊಸ ನಾಯಕಿ..! ಹಾಗಿದ್ರೆ ರಚಿತ ರಾಮ್..?

ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸಾರ್ವಭೌಮ ಸಿನಿಮಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗ್ತಿದೆ. ಇನ್ನೂ ಪಾತ್ರವರ್ಗದಲ್ಲಿ ದೊಡ್ಡ ಸ್ಟಾರ್ ಗಳೆ ಸಿನಿಮಾದಲ್ಲಿದ್ದಾರೆ. ಈಗಾಗ್ಲೇ ನಾಯಕಿಯಾಗಿ ನಟಿ ರಚಿತಾ ರಾಮ್ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದು , ಅಪ್ಪು ಜೊತೆಗೆ ಸ್ಕ್ರೀನ್ ಷೇರ್ ಮಾಡಿಕೊಳ್ತಿದ್ದಾರೆ .. ಈ ಹಿಂದೆ ಮತ್ತೆ ರಚಿತಾ ರಾಮ್ ಅವರನ್ನ ಪುನೀತ್ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಕ್ಕೆ ವಿರೋಧಗಳು ವ್ಯಕ್ತವಾಗಿತ್ತು .. ಸದ್ಯಕ್ಕೆ ಮುಖ್ಯ ನಾಯಕಿಯಾಗಿ ರಚಿತಾ ಅಭಿನಯಿಸಲಿದ್ದಾರೆ. ಸಿನಿಮಾದಲ್ಲಿ ಬರುವ ಸೆಕೆಂಡ್ ಹೀರೊಯಿನ್ ಪಾತ್ರಕ್ಕೆ ಈಗ ಹುಡುಕಾಟದಲ್ಲಿದೆ ಚಿತ್ರತಂಡ .. ಈ ಭರ್ಜರಿ ಅವಕಾಶ ಮತ್ಯಾವ ನಟಿಮಣಿಗೆ ಒದಗಿ ಬರಲಿದೆ ಕಾದು ನೋಡ್ಬೇಕು.

short by Pawan / more at Vahini Tv

Comments