Skip to main content


ಪುನೀತ್ ಸೇಫ್, ಅಭಿಮಾನಿಗಳೇ ಗಾಬರಿಯಾಗ್ಬೇಡಿ!

ಅನಂತಪುರ, ಜೂನ್ 08: ಬಳ್ಳಾರಿಯಲ್ಲಿ ಪವನ್ ಒಡೆಯರ್ ನಿರ್ದೇಶನದ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವಾಗ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ರಸ್ತೆ ತಿರುವಿಗೆ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಬಂಪರ್ ಕಿತ್ತು ಹೋಗಿದೆ. ಈ ಸುದ್ದಿ ಹಬ್ಬುತ್ತಿದ್ದಂತೆ ಗುರುವಾರ ರಾತ್ರಿ ಅಭಿಮಾನಿಗಳು ಕಂಗಾಲಾಗಿ ಹೋಗಿದ್ದರು. ಆದರೆ, ಕ್ಷಣಾರ್ಧದಲ್ಲೇ ಆತಂಕ ದೂರಾಗಿ, ಪುನೀತ್ ಸೇಫ್ ಎಂಬ ಸುದ್ದಿ ತಿಳಿದು ಫ್ಯಾನ್ಸ್ ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ. ಬಿಳಿ ಬಣ್ಣದ KA 05 MW 144 ರೇಂಜ್ ರೋವರ್ ಕಾರ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಜತೆ ಡ್ರೈವರ್ ಅಲ್ಲದೆ, ಗನ್ ಮ್ಯಾನ್ ಮಾತ್ರ ಇದ್ದರು. ರಭಸವಾಗಿ ಗಾಡಿ ಬ್ರೇಕ್ ಹಾಕಿ ತಿರುಗಿಸಿದ್ದರಿಂದ ವಾಹನದಲ್ಲಿದ್ದವರಿಗೆ ಸ್ವಲ್ಪ ಪೆಟ್ಟಾಗಿದೆ. ಈ ನಡುವೆ, ಈ ಅಪಘಾತದ ಬಗ್ಗೆ ಯಾವುದೇ ರೀತಿ ಸುಳ್ಳುಸುದ್ದಿ ಹಬ್ಬಿಸದಂತೆ ಪುನೀತ್ ಅಭಿಮಾನಿಗಳ ಸಂಘ ಮನವಿ ಮಾಡಿಕೊಂಡಿದೆ. ಪುನೀತ್ ಅವರು ಬೆಂಗಳೂರಿಗೆ ಪ್ರಯಾಣಿಸಿದ್ದು, ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

short by Shraman / more at One India

Comments