Skip to main content


ಯಶ್ ನಂತ್ರ ಧ್ರುವ ಸರ್ಜಾಗೆ ಖಡಕ್ ಸೂಚನೆ ಕೊಟ್ಟ ಅಂಬಿ

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್‍ಗೆ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡು ಆಮೇಲೆ ನನ್ನ ಭೇಟಿ ಮಾಡುವಂತೆ ತಿಳಿಸಿದ್ದರು. ಇನ್ನೂ ಮಗ ಅಭಿಷೇಕ್ ಗೂ ಕೂಡ ಸಿನಿಮಾ ಮುಹೂರ್ತ ದಿನದಂದು ಎಚ್ಚರಿಕೆ ಕೊಟ್ಟಿದ್ದರು. ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ವಾರ್ನ್ ಮಾಡಿದ್ದಾರೆ. ಹೌದು, ಅಂಬರೀಷ್ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಧ್ರುವ ಅಂಬರೀಷ್ ಮನೆಗೆ ಹೋಗಿದ್ದರು. ಈ ವೇಳೆ ಅಂಬಿಗೆ ವಿಶ್ ಮಾಡಿ ಸ್ವಲ್ಪ ಹೊತ್ತು ಅವರ ಜೊತೆ ಸಮಯ ಕಳೆದಿದ್ದಾರೆ. ಇದೇ ವೇಳೆಯಲ್ಲಿ ಧ್ರುವಾಗೆ ಅಂಬರೀಶ್ ಖಡಕ್ ಸೂಚನೆ ಕೊಟ್ಟಿದ್ದಾರೆ. ಧ್ರುವ ಸರ್ಜಾ ಒಂದು ಸಿನಿಮಾಗೆ ಕಮಿಟ್ ಆದ ಮೇಲೆ ಮತ್ತೊಂದು ಸಿನಿಮಾಗೆ ಕೈಹಾಕಲ್ಲ. ಆದ್ದರಿಂದ ಎರಡು ವರ್ಷಕ್ಕೆ ಒಂದೊಂದು ಸಿನಿಮಾ ಮಾಡಿಕೊಂಡು ಕೂರಬೇಡಿ, ವರ್ಷಕ್ಕೆ ಎರಡು-ಮೂರು ಸಿನಿಮಾ ಮಾಡೋದನ್ನ ಕಲಿ ಅಂತ ಅಂಬಿ ತಮ್ಮ ಸ್ಟೈಲ್ ನಲ್ಲೇ ಧ್ರುವಾಗೆ ತಿಳಿ ಹೇಳಿದ್ದಾರೆ.       

short by Pawan / more at Public Tv

Comments