Skip to main content


ಅಮೇರಿಕಾ ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಭಾರತೀಯ ನಟಿಯರು.!

ಸುಮಾರು ವರ್ಷಗಳ ಹಿಂದೆ ತೆಲುಗು ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಿಗೆ ಸಹ ನಿರ್ಮಾಪಕನಾಗಿದ್ದ ಕೃಷ್ಣ ಮುಡುಗುಮುಡಿ ಎಂಬುವವರು ಆತನ ಪತ್ನಿ ಜೊತೆ ಸೇರಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಆತನ ಜೊತೆ ಪರಿಚಯ ಹೊಂದಿರುವ ಕೆಲವು ನಟಿಯರನ್ನ ಯುಎಸ್ ಗೆ ಕರೆಸಿ ಈ ದಂಧೆಯಲ್ಲಿ ಭಾಗಿಯಾಗಿಸುತ್ತಿದ್ದರಂತೆ.

ಅಮೇರಿಕಾದಲ್ಲಿ ನಡೆಯುವ ದೊಡ್ಡ ದೊಡ್ಡ ಸಮಾರಂಭಗಳನ್ನ ಟಾರ್ಗೆಟ್ ಮಾಡುವ ಇವರು, ತಾತ್ಕಾಲಿಕ ವೀಸಾ ಪಡೆದು ಅಮೇರಿಕಾಗೆ ಬರುತ್ತಿದ್ದರಂತೆ. ನಂತರ ಇಲ್ಲಿನ ಅಪಾರ್ಟ್ ಮೆಂಟ್ ಗಳಲ್ಲಿ ನೆಲಸಿ, ವ್ಯವಾಹಾರ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ದಂಧೆಯಲ್ಲಿ ಭಾಗಿಯಾಗುವ ನಟಿಯರಿಗೆ ಸುಮಾರು 3000 ಡಾಲರ್ ಹಣ ಸಿಗುತ್ತೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಇದರಲ್ಲಿ ಕೃಷ್ಣ ದಂಪತಿಗೂ ಪಾಲು ಇದೆಯಂತೆ.

ಕಾರ್ಯಕ್ರಮವೊಂದರಲ್ಲಿ ತಾತ್ಕಾಲಿಕ ವೀಸಾ ಹೊಂದಿದ್ದ ನಟಿಯೊಬ್ಬಳು ಮತ್ತು ಆ ನಟಿಯ ಜೊತೆಯಲ್ಲಿ ಒಬ್ಬ ವ್ಯಕ್ತಿ ಕೂಡ ಇದ್ದಿದ್ದನ್ನ ಫೆಡರಲ್ ಅಧಿಕಾರಿಯೊಬ್ಬರು ಗಮನಿಸಿದ್ದರು. ವಿಚಾರಿಸಿದಾಗ, ಅವರು ನನ್ನ ಮ್ಯಾನೇಜರ್ ಎಂದು ಹೇಳಿದ್ದರಂತೆ. ಆದ್ರೆ, ಅವರ ಮೇಲಿನ ಅನುಮಾನದಿಂದ ಅವರನ್ನ ಬೆನ್ನಟ್ಟಿ ಬಂಧಿಸಿದ್ದಾರೆ ಎನ್ನಲಾಗಿದೆ.   

short by Pawan / more at Filmibeat

Comments