Skip to main content


ದಿ ವಿಲನ್ ಟೀಂ ನಿಂದ ಗುಡ್ ನ್ಯೂಸ್ : ಇದೇ ವಾರ ಟೀಸರ್ ರಿಲೀಸ್?

ಸ್ಯಾಂಡಲ್ ವುಡ್ ನಲ್ಲಿ ಭಾರೀ ಕುತೂಹಲ ಮೂಡಿಸಿರುವ ಜೋಗಿ ಪ್ರೇಮ್ ನಿರ್ದೇಶನದ ಕಿಚ್ಚ ಸುದೀಪ್ , ಶಿವಣ್ಣ ಅಭಿನಯದ ದಿ ವಿಲೀನ್ ಸಿನಿಮಾದ ಟೀಸರ್ ಅನ್ನು ಇದೇ ವಾರ ಬಿಡುಗಡೆ ಮಾಡಲು ಪ್ರೇಮ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ದಿ ವಿಲಿನ್ ಸಿನಿಮಾದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಒಂದು ಹಾಡಿನ ಚಿತ್ರೀಕರಣ ಭಾಕಿಯಿದೆ. ಈ ಹಾಡು ಸಿನಿಮಾದ ಮೇಜರ್ ಅಟ್ರಾಕ್ಷನ್ ಆಗಿದೆ ಎಂದು ನಿರ್ದೇಶಕರ ತಂಡ ಹೇಳುತ್ತಿದೆ. ಚಿತ್ರದ ನಾಯಕಿ ಆಯಮಿ ಜಾಕ್ಸನ್ ವಿದೇಶ ಪ್ರವಾಸದಲ್ಲಿದ್ದು, ಆಯಮಿ ಭಾರತಕ್ಕೆ ಕಾಲಿಡುತ್ತಿದ್ದಂತೆ ಚಿತ್ರೀಕರಣವೂ ಆರಂಭವಾಗಲಿದೆ.    

short by Pawan / more at Kannada News Now

Comments