Skip to main content


ಉಪ್ಪಿ ಜೊತೆ ಪ್ರತ್ಯಕ್ಷವಾದ ಕಾನ್ಸ್ ಟೇಬಲ್ ಸರೋಜ

'ಟಗರು' ಸಿನಿಮಾ ಖ್ಯಾತಿಯ ಕಾನ್ಸ್ ಟೇಬಲ್ ಸರೋಜ ಸದ್ಯ ಕನ್ನಡ ಸಿನಿಮಾರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. 'ಟಗರು' ಚಿತ್ರದ ನಂತ್ರ ತ್ರಿವೇಣಿ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಬಂದಿದ್ದು ಉತ್ತಮ ಪಾತ್ರಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ತೆಲುಗು ಸಿನಿಮಾರಂಗದಲ್ಲಿಯೂ ಹಲವಾರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತ್ರಿವೇಣಿ ಸದ್ಯ ಉಪ್ಪಿ ಅಭಿನಯದ 'ಐ ಲವ್ ಯೂ' ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಆರ್ ಚಂದ್ರ ನಿರ್ದೇಶನ ಮಾಡುತ್ತಿರುವ 'ಐ ಲವ್ ಯೂ' ಸಿನಿಮಾದ ಚಿತ್ರೀಕರಣ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆಯುತ್ತಿದೆ

ಉಪ್ಪಿ ಜೊತೆಯಲ್ಲಿ ಕಾನ್ಸ್ ಟೇಬಲ್ ಸರೋಜ ಪಾತ್ರಧಾರಿ ತ್ರಿವೇಣಿ ಕೂಡ ಕಾಣಿಸಿಕೊಂಡಿದ್ದಾರೆ. ಫಾರ್ಮಲ್ ಲುಕ್ ನಲ್ಲಿ ಪ್ರತ್ಯಕ್ಷ ಆಗಿರುವ ಸರೋಜ ನೋಡಿ ಅಭಿಮಾನಿಗಳು ಅವ್ರು ಇವ್ರೇನಾ ಅಂತ ಆಶ್ಚರ್ಯ ಪಡುತ್ತಿದ್ದಾರೆ.   

short by Pawan / more at Filmibeat

Comments