Skip to main content


ವಿಷ್ಣು ಸ್ಮಾರಕ್ಕಾಗಿ ಮುಂದುವರೆದ ಭಾರತಿ ಹೋರಾಟ, ಕುಮಾರಸ್ವಾಮಿಗೆ ಮನವಿ

ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಹೋರಾಟವನ್ನು ಮುಂದುವರೆಸಿರುವ ನಟಿ ಭಾರತಿ ಅವರು ಇಂದು ಹೊಸ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಅಳಿಯ ಅನಿರುದ್ಧ ಜೊತೆಗೆ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದರು. ಬೆಂಗಳೂರಲ್ಲಿ ವಿಷ್ಣು ಸ್ಮಾರಕಕ್ಕಾಗಿ ಮೀಸಲಿಟ್ಟಿರುವ ಜಾಗದ ಕುರಿತು ತಕರಾರು ಎದ್ದಿದ್ದು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿಕೊಡಿ ಎಂದು ಭಾರತಿ ಅವರು ಕುಮಾರಸ್ವಾಮಿ ಅವರನ್ನು ಕೇಳಿದ್ದಾರೆ.

short by Shraman / more at One India

Comments