Skip to main content


ಸರ್ಬಿಯಾ ದೇಶಕ್ಕೆ ಕಿಚ್ಚ ಪ್ರಯಾಣ! ಕಾರಣ ಏನು ಗೊತ್ತಾ!?

ಕಿಚ್ಚ ಸುದೀಪ್‌ ಇತ್ತೀಚೆಗಷ್ಟೇ ಪೈಲ್ವಾನ್‌ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಅದನ್ನ ಖುಷಿಯಾಗಿ ಟ್ವೀಟ್‌ ಮಾಡಿದ್ರು. ಅದ್ರ ಬೆನ್ನಿಗೆ ಈಗ ಕಿಚ್ಚ ಫಾರಿನ್‌ ಗೆ ಹೊರಟ್ಟಿದ್ದಾರೆ. ಯೂರೋಪ್‌ ನ ಸರ್ಬಿಯಾ ದೇಶದತ್ತ ಕಿಚ್ಚ ಸುದೀಪ್‌ ಪಯಣ ಬೆಳೆಸ್ತಿದ್ದಾರೆ. ಅಷ್ಟಕ್ಕೂ ಇವ್ರು ಸರ್ಬಿಯಾ ಕಡೆ ಹೊರಟಿರೋದು ಪ್ರವಾಸಕ್ಕಲ್ಲ. ಪೈಲ್ವಾನ್‌ ಫಸ್ಟ್‌ ಶೆಡ್ಯೂಲ್‌ ಮುಗಿಸಿರೋ ಕಿಚ್ಚ, ಅದ್ರ ಬೆನ್ನಿಗೆ ಕೋಟಿಗೊಬ್ಬ 3 ಸಿನಿಮಾ ಶೂಟಿಂಗ್‌ ನಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದ್ರಂತೆ, ಕೋಟಿಗೊಬ್ಬ3 ಚಿತ್ರದ ಶೂಟಿಂಗ್‌ ಇದೇ ತಿಂಗಳಿನಿಂದ ಶುರುವಾಗ್ತಿದ್ದು, ಸರ್ಬಿಯಾ ದೇಶದಲ್ಲೇ ಬರೊಬ್ಬರಿ 26 ರಿಂದ 28 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ.    

short by Pawan / more at Balkani News

Comments