Skip to main content


ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದಲ್ಲಿ ಯಂಗ್ ಅಂಬರೀಷ್-ಸುಹಾಸಿನಿಯಾಗಿ ಸುದೀಪ್-ಶೃತಿ ಹರಿಹರನ್

ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದಲ್ಲಿ ಸುದೀಪ್ ಮತ್ತು ಶೃತಿ ಹರಿಹರನ್ ನಟನೆಯ ಫೋಟೋಗಳು ಇತ್ತೀಚೆಗೆ ಬಿಡುಗಡೆಯಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

ಅಂಬರೀಷ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರದಲ್ಲಿ ಯುವಕನಾಗಿರುವ ಅಂಬರೀಷ್ ಪಾತ್ರವನ್ನು ಸುದೀಪ್ ಮಾಡುತ್ತಿದ್ದಾರೆ ಮತ್ತು ಸುಹಾಸಿನಿ ಯುವತಿಯಾಗಿರುವ ಪಾತ್ರವನ್ನು ಶೃತಿ ಹರಿಹರನ್ ನಿಭಾಯಿಸುತ್ತಿದ್ದಾರೆ.

ಗುರುದತ್ತ ಗಾಣಿಗ ನಿರ್ದೇಶನದ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದ ಕೊನೆಯ ಭಾಗದ ಕೆಲಸ ನಡೆಯುತ್ತಿದ್ದು ರೆಬೆಲ್ ಸ್ಟಾರ್, ಸುದೀಪ್ ಮತ್ತು ಇತರ ನಟರ ಡಬ್ಬಿಂಗ್ ಕೆಲಸ ಮುಗಿದಿದೆ. ಕೇವಲ ಒಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು ಮುಂದಿನ ತಿಂಗಳು ಆಡಿಯೊ ಬಿಡುಗಡೆಯಾಗಲಿದೆ.   

short by Pawan / more at Kannada Prabha

Comments