Skip to main content


ಫ್ಯಾನ್ಸ್ ವಾರ್ ಮಾಡುವವರಿಗೆ ಯಶ್ ಖಡಕ್ ವಾರ್ನಿಂಗ್

ಸದ್ಯ ಗಾಂಧಿನಗರದಲ್ಲಿ ಯಶ್ ಹಾಗೂ ಸುದೀಪ್ ಫ್ಯಾನ್ಸ್ ಯಶ್ ಕ್ಷಮೆ ಕೇಳಬೇಕು, ಸುದೀಪ್ ಕ್ಷಮೆ ಕೇಳಬೇಕು ಅಂತ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಿದ್ದಿಗೆ ಬಿದ್ದು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಇದನ್ನ ನೋಡಿದ ಸುದೀಪ್ ತಮ್ಮ ಅಭಿಮಾನಿಗಳಿಗೆ ಈ ರೀತಿ ಮಾಡುವುದು ಸರಿಯಲ್ಲ. ನಾವು ಚೆನ್ನಾಗಿದ್ದೇವೆ ಎಂದು ತಿಳಿಸಿದ್ದರು. ಅದಕ್ಕೆ ಗೌರವ ಕೊಟ್ಟು ಕಿಚ್ಚನ ಅಭಿಮಾನಿಗಳು ತಮ್ಮ ಪೋಸ್ಟ್ ಗಳನ್ನ ಡಿಲೀಟ್ ಮಾಡಿದರು.

ಆದರೆ ಯಶ್ ಅಭಿಮಾನಿಗಳು ಅದನ್ನೇ ಅಡ್ವಾಂಟೆಜ್ ಆಗಿ ಬಳಸಿಕೊಂಡು ಸುದೀಪ್ ಅಭಿಮಾನಿಗಳಿಗೆ ಟ್ರೋಲ್ ಮಾಡಲು ಶುರು ಮಾಡಿಕೊಂಡಿದ್ರು. ಇದನ್ನ ಗಮನಿಸಿದ ರಾಕಿಂಗ್ ಸ್ಟಾರ್ ಇದು ಸರಿಯಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ. 

ಎಲ್ಲಾರಿಗೂ ನಮಸ್ಕಾರ. ಸಾಮಾಜಿಕ ಜಾಲತಾಣದಲ್ಲಿ ಈಗ ನಡೆಯುತ್ತಿರೋ ಬೆಳವಣಿಗೆ ಒಳ್ಳೆಯದಲ್ಲ. ಕೆಲವು ಕಮೆಂಟ್ಸ್ ಗಳನ್ನೂ ನಾನು ಗಮನಿಸಿದ್ದೇನೆ. ಸುದೀಪ್‌ ಅವರು ನನಗಿಂತ ಹಿರಿಯರು.ಅವರಿಗೆ ಗೌರವ ಕೊಡಲಿಲ್ಲ ಅಂದ್ರೆ, ನನಗೂ ನೀವು ಗೌರವ ಕೊಡದಂತೆಯೇ. ಘನತೆಯಿಂದ ವರ್ತಿಸಿ, ಇದನ್ನ ದೊಡ್ಡದು ಮಾಡ್ಬೇಡಿ.

ನಾನು ಸಾರ್‌ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟ ಹಾಗಲ್ಲ. ಅಥವಾ ನಾನು ಸಾರ್‌ ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಮ್ಮಿಯಾಗಲ್ಲ. ನಾನು ಅವರನ್ನ ತುಂಬಾ ಗೌರವಿಸ್ತೀನಿ. ನನ್ನ ಮೇಲಿನ ಅಭಿಮಾನ ತೋರಿಸಿಕೊಳ್ಳುವುದಕ್ಕಾಗಿ ಅವ್ರನ್ನ ಅಗೌರವದಿಂದ ಕಾಣೋದು ಸರಿಯಲ್ಲ. ದಯವಿಟ್ಟು ಇದನ್ನ ಇಲ್ಲಿಗೆ ಬಿಡಿ ಎಂದು ಹೇಳಿದ್ದಾರೆ.     

short by Pawan / more at Filmibeat

Comments