Skip to main content


ಉಡುಪಿ ಕೃಷ್ಣ ದೇವಸ್ಥಾನದ ಎದುರು ಭಿಕ್ಷೆ ಬೇಡಿದ ಚಿರು

ಚಿರಂಜೀವಿ ಸರ್ಜಾ ಮತ್ತು ನಿಶ್ವಿಕಾ ನಾಯ್ಡು ಅಭಿನಯದ ಚಿತ್ರ 'ಅಮ್ಮಾ ಐ ಲವ್‌ ಯೂ'. ಚಿತ್ರದಲ್ಲಿ ಚಿರು ಡಬಲ್‌ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಶ್ರೀಮಂತನಾಗಿ ಮತ್ತು ಭಿಕ್ಷುಕನಾಗಿ ಎರಡೂ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ದೃಶ್ಯವೊಂದರಲ್ಲಿ ಉಡುಪಿ ಕೃಷ್ಣ ದೇವಸ್ಥಾನದ ಎದುರು ಬಿಕ್ಷುಕನ ವೇಷದಲ್ಲಿ ಅಕ್ಷರಶಃ ಬಿಕ್ಷೆ ಬೇಡಿದ್ದಾರೆ. ಇದು ಬಹಳ ಚಾಲೆಂಜಿಂಗ್‌ ಆಗಿತ್ತು ಎಂದಿದ್ದಾರೆ ಚಿರು. 'ಭಿಕ್ಷುಕನಾಗಿ ನಟಿಸಬೇಕು ಎಂದಾಗ ನಾನು ಮೊದಲ ಒಪ್ಪಿರಲೇ ಇಲ್ಲ. ಕೊನೆಗೆ ನಿರ್ದೇಶಕ ಚೈತನ್ಯ ಒಪ್ಪಿಸಿ ಧೈರ್ಯ ತುಂಬಿದರು. ಈಗ ಈ ಸಿನಿಮಾ ನೋಡಿದಾಗ ಇಂಥದ್ದೊಂದು ಸಿನಿಮಾ ಬಿಟ್ಟಿದ್ದರೆ ನನ್ನಂಥ ಮೂರ್ಖ ಇರುತ್ತಿರಲಿಲ್ಲ ಎನ್ನಿಸುತ್ತೆ' ಎಂದಿದ್ದಾರೆ ಚಿರು.      

short by Pawan / more at Vijayakarnataka

Comments