Skip to main content


ಹಳ್ಳಿ ಮಕ್ಕಳ ಜೊತೆ ಕ್ರಿಕೆಟ್ ಆಡಿದ ಜಾಗ್ವಾರ್ ನಿಖಿಲ್!

ಅತ್ತ ತಂದೆ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿ ಕುರ್ಚಿ ಅಲಂಕರಿಸಿದ ಹೊತ್ತಿನಲ್ಲಿ ಮಗ ನಿಖಿಲ್ ಕುಮಾರ್ ಹೊಸಾ ಹುಮ್ಮಸ್ಸಿನಿಂದಿಗೆ ಎರಡನೇ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಎ ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣದಲ್ಲಿ ಬಾಗಿಯಾಗಿರುವ ನಿಖಿಲ್ ಕೊಂಚ ಬಿಡುವು ಸಿಕ್ಕಾಕ್ಷಣವೇ ಸ್ಥಳೀಯ ಮಕ್ಕಳೊಂದಿಗೆ ಕ್ರಿಕೆಟ್ ಆಡುವ ಮೂಲಕ ರಿಲೀಫಾಗಿದ್ದಾರೆ!

ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ಸದ್ಯ ಮೈಸೂರಿನಲ್ಲಿ ನಡೆಯುತ್ತಿದೆ. ಇಲ್ಲಿನ ನಾರ್ಥ್ ಬ್ಯಾಂಕ್ ಪಕ್ಕದ ಹಳ್ಳಿಯಲ್ಲಿ ಆಕ್ಷನ್ ಭಾಗದ ಚಿತ್ರೀಕರಣದಲ್ಲಿ ನಿಖಿಲ್ ಪಾಲ್ಗೊಂಡಿದ್ದಾರೆ. ಒಂದಷ್ಟು ದಿನಗಳಿಂದ ಇಲ್ಲಿ ಬಿಡುವಿರದೆ ಶೂಟಿಂಗ್ ನಡೆಯುತ್ತಿದೆ. ಅಪರೂಪಕ್ಕೆ ಸಿಕ್ಕ ಚೂರು ಬಿಡುವಿನಲ್ಲಿ ನಿಖಿಲ್ ಹಳ್ಳಿ ಮಕ್ಕಳ ಜೊತೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ.      

short by Pawan / more at Cinibuzz

Comments