Skip to main content


ಮುರಳಿಯ ಭರಾಟೆ..!

ಕಳೆದ ವರ್ಷ ಮಫ್ತಿ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆದಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ನೆಕ್ಸ್ಟ್ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸದ್ಯ ಸ್ಯಾಂಡಲ್ವುಡ್ನಲ್ಲಿ ಮಾಸ್ ಸಿನಿಮಾಗಳನ್ನು ನೀಡುವುದರಲ್ಲಿ ಶ್ರೀಮುರಳಿ ಅವರು ಎತ್ತಿದ ಕೈ ಅವರ ಉಗ್ರಂ, ರಥಾವರ, ಮಫ್ತಿ ಚಿತ್ರಗಳಲ್ಲಿನ ಮಾಸ್ ಆಕ್ಟಿಂಗ್ ಪ್ರೇಕ್ಷಕರು ಫುಲ್ ಫಿದಾ ಆಗಿಬಿಟ್ಟಿದ್ದಾರೆ.

ಮಫ್ತಿ ಚಿತ್ರದಲ್ಲಿನ ಅವರ ಪಾತ್ರಕ್ಕೆ ಮಾರುಹೋಗದ ಪ್ರೇಕ್ಷಕರೇ ಇಲ್ಲ. ಇನ್ನು ಇದಾದ ನಂತರ ಶ್ರೀಮುರಳಿ ಅವರು ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಹೌದು ಶ್ರೀಮುರಳಿ ಅವರು ಭರಾಟೆ ಎಂಬ ಚಿತ್ರದಲ್ಲಿ ಇದೀಗ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಇದೇ ಚಿತ್ರಕ್ಕೆ ಜೋರು ಎಂದು ಹೆಸರಿಡಲಾಗಿತ್ತು ಆದರೆ ಇದೀಗ ಆ ಚಿತ್ರಕ್ಕೆ ಭರಾಟೆ ಎಂಬ ಟೈಟಲ್ ಅನ್ನು ಫೈನಲ್ ಮಾಡಲಾಗಿದ್ದು ಇಂದು ಆ ಚಿತ್ರದ ಮುಹೂರ್ತ ಭರ್ಜರಿಯಾಗಿ ನೆರವೇರಿತು. ರೋರಿಂಗ್ ಸ್ಟಾರ್ ಶ್ರೀಮುರಳಿ , ಹಾಗೂ ಚಿತ್ರನಟಿ ಶ್ರೀಲೀಲಾ ಮತ್ತು ಚಿತ್ರ ನಿರ್ದೇಶಕರಾದ ಮತ್ತು ಚೇತನ್ ಹಾಗೂ ಇನ್ನಿತರ ಚಿತ್ರತಂಡದವರು ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು.         

short by Pawan / more at Troll haida

Comments