Skip to main content


ಐ ಲವ್ ಯೂ ಚಿತ್ರದಲ್ಲಿ ಉಪೇಂದ್ರಗೆ ರಚಿತಾ ರಾಮ್ ಜೋಡಿ?

ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಐ ಲವ್ ಯೂ ಚಿತ್ರದಲ್ಲಿ ಉಪೇಂದ್ರರಿಗೆ ಯಾರು ನಾಯಕಿಯಾಗುತ್ತಾರೆ ಎಂಬ ಕುತೂಹಲ ಮೂಡಿಸಿತ್ತು. ಇದೀಗ ಆ ಊಹಾಪೋಹಗಳಿಗೆ ತೆರೆ ಏಳೆಯಲಾಗಿದ್ದು ಉಪೇಂದ್ರರಿಗೆ ಜೋಡಿಯಾಗಿ ರಚಿತಾ ರಾಮ್ ನಟಿಸಲಿದ್ದಾರೆ. ಜೂನ್ 5ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನು ಚಿತ್ರದ ಕುರಿತಂತೆ ರಚಿತಾ ರಾಮ್ ಜತೆ ಚರ್ಚೆ ಮತ್ತು ವೇಳಾಪಟ್ಟಿ ಕುರಿತಂತೆ ಮಾತುಕತೆ ನಡೆಯಬೇಕಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.       

short by Pawan / more at Kannada Prabha

Comments