Skip to main content


ಧವನ್, ವಿಜಯ್ ಶತಕ; ಭಾರತಕ್ಕೆ ಮೊದಲ ದಿನದ ಗೌರವ

ಆರಂಭಿಕರಾದ ಶಿಖರ್ ಧವನ್ (107) ಹಾಗೂ ಮುರಳಿ (105) ವಿಜಯ್ ಬಾರಿಸಿರುವ ಆಕರ್ಷಕ ಶತಕಗಳ ನೆರವಿನಿಂದ ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ಅಫಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮಳೆ ಬಾಧಿತ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ 78 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 347 ರನ್ ಪೇರಿಸಿದೆ. ಈ ಮೊದಲು ಟಾಸ್ ಗೆದ್ದುಕೊಂಡಿರುವ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಇದರಂತೆ ಟೆಸ್ಟ್ ಪಂದ್ಯದ ಮೊದಲ ಅವಧಿಯಲ್ಲೇ ಶತಕ ಬಾರಿಸಿದ ಗೌರವಕ್ಕೆ ಶಿಖರ್ ಧವನ್ ಪಾತ್ರವಾದರು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕ್ರಿಕೆಟ್ ಕೂಸು ಅಫಘಾನಿಸ್ತಾನ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಭಾರತೀಯ ಆರಂಭಿಕರಾದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಬಿರುಸಿನ ಆರಂಭವೊದಗಿಸಿದರು.     

short by Pawan / more at Vijayakarnataka

Comments