Skip to main content


ಇನ್ನುಮುಂದೆ ರೈಲಿನಲ್ಲಿ ಹೆಚ್ಚುವರಿ ಲಗೇಜ್ ತಂದರೆ ಆರು ಪಟ್ಟು ದಂಡ!

ಭಾರತೀಯ ರೈಲ್ವೆ ಪ್ರಯಾಣಿಕರಿಗೊಂದು ಶಾಕಿಂಗ್ ಸುದ್ದಿ ನೀಡಿದ್ದು, ಇನ್ನುಮುಂದೆ ವಿಮಾನ ಪ್ರಯಾಣದ ರೀತಿ ರೈಲ್ವೆಯಲ್ಲೂ ಹೆಚ್ಚುವರಿ ಲಗೇಜ್ ಕೊಂಡೊಯ್ಯುವ ಮುನ್ನ ಎಚ್ಚರಿಕೆ ವಹಿಸಿ. ಇನ್ನುಮುಂದೆ ಪ್ರಯಾಣಿಕರ ಬಳಿ ಹೆಚ್ಚುವರಿ ಲಗೇಜ್ ಪತ್ತೆಯಾದರೆ ಆರು ಪಟ್ಟು ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮಗಳ ಪ್ರಕಾರ, ಸ್ಲೀಪರ್ ದರ್ಜೆ ಪ್ರಯಾಣಿಕರು 40 ಕೆಜಿ ಮತ್ತು ದ್ವಿತಿಯ ದರ್ಜೆ ಪ್ರಯಾಣಿಕರು 35 ಕೆಜಿ ತೂಕದ ಲಗೇಜ್ ಅನ್ನು ಉಚಿತವಾಗಿ ಕೊಂಡೊಯ್ಯಬಹುದಾಗಿದೆ. ಹಣಪಾವತಿಸಿ ಗರಿಷ್ಠ 80 ಕೆಜಿ ಹಾಗೂ 70 ಕೆಜಿ ಲಗೇಜ್ ಕೊಂಡೊಯ್ಯಲು ಅವಕಾಶವಿದೆ.    

short by Pawan / more at Kannada Prabha

Comments