Skip to main content


ವಾಜಪೇಯಿ ವಿರೋಧಿ ಪೋಸ್ಟರ್‌: ವಿವಾದ ಸೃಷ್ಟಿಸಿದ ಆಪ್

ದಿಲ್ಲಿ ಮುಖ್ಯಮಂತ್ರಿ ನಿವಾಸದಿಂದ ಲೆಫ್ಟಿನೆಂಟ್ ಗವರ್ನರ್ ನಿವಾಸದವರೆಗೆ ಆಮ್ ಆದ್ಮಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಹೇಳಿಕೆಗಳನ್ನು ಹೊಂದಿದ್ದ ಪೋಸ್ಟರ್ ಇತ್ತು ಎನ್ನುವುದು ವಿವಾದ ಸೃಷ್ಟಿಸಿದೆ. ಆಪ್ ಶಾಸಕಿ ಅಲ್ಕಾ ಲಾಂಬಾ ಅಥವಾ ಇನ್ಯಾರೋ ಗುಂಪಿನಲ್ಲಿ ವಾಜಪೇಯಿ ವಿರೋಧಿ ಬರಹವಿದ್ದ ಪೋಸ್ಟರ್ ಹಿಡಿದುಕೊಂಡಿದ್ದರು ಎನ್ನವುದು ವಿವಾದ ಸೃಷ್ಟಿಯಾಗುತ್ತಲೇ ಪೋಸ್ಟರ್ ಅನ್ನು ಮರೆಮಾಚಲಾಗಿದೆ. ಆದರೆ ಅಲ್ಕಾ ಲಾಂಬಾ ಅದನ್ನು ನಿರಾಕರಿಸಿದ್ದಾರೆ.

ಆಪ್ ಪೋಸ್ಟರ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಆಪ್‌ ಕಾರ್ಯಕರ್ತರು ಅಂತಹ ಕೆಲಸ ಮಾಡಿಲ್ಲ, ಅದೇನಿದ್ದರೂ ಬಿಜೆಪಿ ಕಾರ್ಯಕರ್ತರು ಮಾಡಿರಬಹುದು ಎಂದಿದ್ದಾರೆ. ವಿವಾದ ಸೃಷ್ಟಿಸುವುದು ಮತ್ತು ಆಪ್ ಪ್ರತಿಭಟನಾ ಸಭೆಯನ್ನು ತಡೆಯುವುದು ಬಿಜೆಪಿ ಉದ್ದೇಶವಾಗಿದೆ, ಹೀಗಾಗಿ ಅವರೇ ಅಂತಹ ಪೋಸ್ಟರ್ ಸೃಷ್ಟಿಸಿ ಅದನ್ನು ಹಿಡಿದುಕೊಂಡಿರಬಹುದು. ಆಪ್ ಅಂತಹ ಪೋಸ್ಟರ್ ತಯಾರಿಸಿಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.   

short by Pawan / more at Vijayakarnataka

Comments