Skip to main content


ಪೊಗರು ಚಿತ್ರಕ್ಕೂ ಮುಂಚೆಯೇ ಧ್ರುವ ಸರ್ಜಾ ಆರನೇ ಸಿನಿಮಾ ಸುದ್ದಿ

ನಟ ಧ್ರುವ ಸರ್ಜಾ 'ಭರ್ಜರಿ' ಸಿನಿಮಾದ ನಂತರ 'ಪೊಗರು' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಶೂಟಿಂಗ್ ಈಗಾಗಲೇ ನಡೆಯುತ್ತಿದೆ. 'ಪೊಗರು' ಧ್ರುವ ಸರ್ಜಾ ನಟನೆಯ ನಾಲ್ಕನೇ ಸಿನಿಮಾವಾಗಿದೆ. ಆದರೆ ಈಗ ಅವರ ಆರನೇ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಬಂದಿದೆ. 'ಜಗ್ಗುದಾದ' ಖ್ಯಾತಿಯ ನಿರ್ದೇಶಕ ರಾಘವೇಂದ್ರ ಹೆಗ್ಡೆ ಅವರು ಧ್ರುವ ಸರ್ಜಾಗೆ ಒಂದು ಚಿತ್ರ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಇತ್ತು. ಆದರೆ ಆ ಚಿತ್ರ 2019 ರಲ್ಲಿ ಸೆಟ್ಟೇರಲಿದೆಯಂತೆ. ಧ್ರುವ 'ಪೊಗರು' ಚಿತ್ರದ ನಂತರ ನಿರ್ಮಾಪಕ ಉದಯ್ ಮೆಹ್ತಾ ಬ್ಯಾನರ್ ಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಅದು ಅವರ ಐದನೇ ಚಿತ್ರವಾಗಿದೆ. ಸೋ, ಅದು ಮುಗಿದ ಮೇಲೆ ಆರನೇ ಸಿನಿಮಾ ಶುರು ಆಗಲಿದೆ.      

short by Pawan / more at Filmibeat

Comments