Skip to main content


ಮೂರೇ ನಿಮಿಷದಲ್ಲಿ ರಾಗಾ ಪ್ರೆಸ್‌ಮೀಟ್‌ ಖತಂ !

ಹಲವಾರು ವಿಚಾರದಲ್ಲಿ ಟೀಕೆ, ನಗೆಪಾಟಲಿಗೆ ಗುರಿಯಾಗುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಂಗಳವಾರ 3 ನಿಮಿಷದ ಸುದ್ದಿಗೋಷ್ಠಿ ನಡೆಸಿ ಸುದ್ದಿಯಾಗಿದ್ದಾರೆ. ಭಾರತ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕಿರು ಸುದ್ದಿಗೋಷ್ಠಿ ಎಂದೂ ಮಾಧ್ಯಮಗಳು ಇದನ್ನು ಬಣ್ಣಿಸಿ, ವ್ಯಂಗ್ಯಕ್ಕೂ ಗುರಿಯಾಗಿದ್ದಾರೆ.

ಆದರೆ ಈ ವಿಚಾರವನ್ನು ಕಾಂಗ್ರೆಸ್ ಮಾಧ್ಯಮ ವಿಭಾಗ ತಳ್ಳಿಹಾಕಿದ್ದು, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಜತೆಗಿನ ಸಭೆ ಬಳಿಕ ಕೆಲ ವಿದ್ಯುನ್ಮಾನ ಮಾಧ್ಯಮ ರಾಹುಲ್‌ ಗಾಂಧಿ ಅವರ ಹೇಳಿಕೆ ಕೇಳಿದೆ. ಈ ವೇಳೆ ರಾಹುಲ್‌ ಗಾಂಧಿ ಅವರು ಚಂದ್ರಾಪುರಕ್ಕೆ ಹೊರಡುವ ಮುನ್ನ ಮಾಧ್ಯಮಕ್ಕೆ ಹೇಳಿಕೆ(ಬೈಟ್‌) ನೀಡುವುದಾಗಿ ಕಾಂಗ್ರೆಸ್‌ ಮಾಧ್ಯಮ ವಿಭಾಗಕ್ಕೆ ತಿಳಿಸಿದ್ದಾರೆ. ಈ ವಿಚಾರದ ಸಂದೇಶ ಮೀಡಿಯಾಗಳಿಗೆ ತಪ್ಪಾಗಿ ರವಾನೆಯಾಗಿದೆ ಎಂದು ಸಮರ್ಥಿಸಿಕೊಂಡಿದೆ. 

ಅಷ್ಟೇ ಅಲ್ಲದೆ ಬೈಟ್‌ ನೀಡಲು ಗಾರ್ಡನ್‌ ಇರುವ ಜಾಗ ಉತ್ತಮ ಎಂದು ರಾಹುಲ್‌ ಮಾಧ್ಯಮ ವಿಭಾಗಕ್ಕೆ ತಿಳಿಸಿದ್ದಾರೆ. ಆದರೆ ಇದಕ್ಕೆ ಅವರ ಭದ್ರತಾ ಪಡೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿನ ಕ್ಲಬ್‌ನಲ್ಲಿ ಬೈಟ್‌ ನೀಡಲು ವ್ಯವಸ್ಥೆ ಮಾಡಲಾಯಿತು. ಈ ವಿಚಾರ ಹಲವರಿಗೆ ತಲುಪಿಸಲಾಗಿಲ್ಲ ಎಂದು ಕಾಂಗ್ರೆಸ್‌ ಮಾಧ್ಯಮ ವಿಭಾಗ ಹೇಳಿಕೊಂಡಿದೆ.     

short by Pawan / more at Vijayakarnataka

Comments