Skip to main content


ಸಿದ್ದರಾಮಯ್ಯ ಮುಂದೆ ಎಂಬಿ ಪಾಟೀಲ್ ಕಣ್ಣೀರು

ರಾಜ್ಯ ಸರಕಾರ ಸಂಪುಟ ರಚನೆಯಾಗಿ ಖಾತೆ ಹಂಚಿಕೆಯಾಗುತ್ತಲೇ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ. ಸಂಭವನೀಯ ಸಚಿವರ ಪಟ್ಟಿಯಲ್ಲಿದ್ದ ಎಂ. ಬಿ. ಪಾಟೀಲ್‌ಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಅವರು ಕಾವೇರಿಗೆ ತೆರಳಿ ಅಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಣ್ಣೀರು ಸುರಿಸಿದ್ದಾರೆ. ಪಟ್ಟಿಯಲ್ಲಿ ಹೆಸರಿದ್ದರೂ ಕೊನೆ ಗಳಿಗೆಯಲ್ಲಿ ಕೈಬಿಟ್ಟಿದ್ದರಿಂದ ಸಚಿವ ಸ್ಥಾನ ವಂಚಿತನಾಗಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸಮಾಜಕ್ಕಾಗಿ ಮತ್ತು ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ್ದರೂ, ಪಕ್ಷ ಕಡೆಗಣಿಸಿದೆ. ಅದು ಸರಿಯಲ್ಲ ಎಂದು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ.    

short by Pawan / more at Vijayakarnataka

Comments