Skip to main content


ಕ್ವಾಂಟಿಕೋ ವಿವಾದ: ಕ್ಷಮೆಯಾಚಿಸಿದ ಪ್ರಿಯಾಂಕಾ ಚೋಪ್ರಾ

‘ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿಯರನ್ನು ಸಿಲುಕಿಸಲು ಭಾರತೀಯರು ಯತ್ನಿಸುತ್ತಿದ್ದಾರೆ’ ಎಂಬಂತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ‘ಕ್ವಾಂಟಿಕೋ’ ಸಂಚಿಕೆಯಲ್ಲಿ ತೋರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆ ಕೇಳಿದ್ದಾರೆ.
ಈ ವಿಚಾರದ ಬಗ್ಗೆ ಪ್ರಿಯಾಂಕಾ ಕೊನೆಗೂ ಮೌನ ಮುರಿದಿದ್ದು ‘ನನಗೆ ತುಂಬಾ ಬೇಸರವಾಗಿದೆ. ಕ್ವಾಂಟಿಕೋ ಎಪಿಸೋಡಿನಲ್ಲಿ ಆ ರೀತಿ ತೋರಿಸಿರುವುದು ಭಾರತೀಯರ ಮನಸ್ಸಿಗೆ ಘಾಸಿಯಾಗಿರುವುದಕ್ಕೆ ನಾನು ಕ್ಷಮೆ ಕೇಳುತ್ತೇನೆ. ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ಭಾರತೀಯಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಆ ಭಾವನೆ ಎಂದಿಗೂ ಬದಲಾಗಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.     

short by Pawan / more at Prajavani