Skip to main content


ಅನಂತ್ ನಾಗ್ ಆತ್ಮಹತ್ಯೆಗೆ ಯತ್ನಿಸಿದ್ದು ನಿಜವೇ? ಆ ಒಂದು ಫೋನ್ ಕಾಲ್ ಅವರನ್ನ ಬದುಕಿಸಿತು..

ಪದೇ ಪದೇ ಕಾಡುವ ಸೋದರನ ಸಾವಿನ ದುಃಖದಿಂದ ಚೇತರಿಸಿಕೊಳ್ಳಲಾಗದೆ ಅನಂತ್‌ನಾಗ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾರೆ. ಹೆಂಡತಿ ಗಾಯತ್ರಿ ಮತ್ತು ಮಗಳನ್ನು ಮನೆಯಲ್ಲೇ ಬಿಟ್ಟು ಅನಂತ್ ಹೈದರಾಬಾದಿಗೆ ಹೋಗುತ್ತಾರೆ. ಅಲ್ಲಿನ ಹೋಟೆಲೊಂದರ ಎಂಟನೇ ಮಹಡಿಯ ಮೇಲಿನಲ್ಲೊಂದು ರೂಮು ಬಾಡಿಗೆಗೆ ಹಿಡಿದು ಬೆಳಗ್ಗಿನಿಂದ ಸಂಜೆಯ ತನಕ ಗುಂಡು ಹಾಕುತ್ತಾರೆ.

ರಾತ್ರಿಯಾಗುತ್ತಿರುವಂತೆಯೇ ಆ ಕೋಣೆಯ ಕಿಟಕಿಯಿಂದ ಹೊರಗೆ ಜಿಗಿಯುವ ಸಿದ್ಧತೆ ಮಾಡಿಕೊಳ್ಳುತ್ತಾರೆ. ಸೂರ್ಯ ಮುಳುಗಿದ ನಂತರವೂ ಗುಂಡು ಮುಂದುವರಿಯುತ್ತದೆ. ರಾತ್ರಿ ಹನ್ನೆರಡರ ಹೊತ್ತಿಗೆ ತೂರಾಡುತ್ತಾ ಕಿಟಕಿಯ ಹೊರಗೆ ಜಿಗಿಯಬೇಕೆನ್ನುವಷ್ಟರಲ್ಲಿ ಟೆಲಿಫೋನ್ ರಿಂಗಾಗುತ್ತದೆ. ಕೊನೆಯಲ್ಲೊಮ್ಮೆ ಮಾತನಾಡುವ ಮೂಡ್ ಬಂದು ಬಿಡುತ್ತದೆ. ಕಿಟಕಿಯಿಂದ ಹೊರಗೆ ಚಾಚಿದ ಕಾಲನ್ನು ಒಳಗೆಳೆದುಕೊಂಡು ರಿಸೀವರ್ ಎತ್ತುತ್ತಾರೆ.

ಗಾಯತ್ರಿ! ಆ ಸರಿಹೊತ್ತಿನಲ್ಲಿ ತಮ್ಮ ಹೆಂಡತಿ ಫೋನ್ ಮಾಡಿದ ಬಗ್ಗೆ ದಿಗ್ಭ್ರಮೆಗೊಂಡ ಅನಂತ್ ಮಾತನಾಡುತ್ತಾರೆ. ಆಡುತ್ತಾ ಆಡುತ್ತಾ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಳ್ಳುತ್ತಾರೆ. ಗಾಬರಿ ಬಿದ್ದ ಗಾಯತ್ರಿ ಬೆಳಗ್ಗಿನವರೆಗೆ ಮಾತನಾಡುತ್ತಲೇ ಹೋಗುತ್ತಾರೆ. ಬೆಳಗಾಗುತ್ತದೆ. ನಶೆ ಇಳಿದಿರುತ್ತದೆ. ಗಾಯತ್ರಿ ತಕ್ಷಣ ಹೊರಟು ಬನ್ನಿ ಎನ್ನುತ್ತಾರೆ. ಅನಂತ್‌ಗೆ ಮಗುವಿನ ನೆನಪಾಗುತ್ತದೆ. ಸೂಟ್‌ಕೇಸ್ ರೆಡಿ ಮಾಡಿಕೊಂಡು ಬೆಂಗಳೂರಿಗೆ ಹೊರಟು ಬಿಡುತ್ತಾರೆ. ಇವಿಷ್ಟು ಅನಂತ್ ಅಂದು ಹೇಳಿದ ಆತ್ಮಹತ್ಯೆಯ ಎಪಿಸೋಡು.    

short by Pawan / more at Karunaaduu

Comments