Skip to main content


ನಾಗತಿಹಳ್ಳಿ ಮಗಳು ಬರೆದ ಕಥೆ ಒಪ್ಪಿಕೊಂಡ ಮಾನ್ವಿತಾ

ಟಗರು ಪುಟ್ಟಿ ಎಂದೇ ಈಗ ಹೆಸರಾಗಿರುವ ನಟಿ ಮಾನ್ವಿತಾ ಹರೀಶ್‌ ಲಂಡನ್‌ಗೆ ಹೊರಡಲು ಸಿದ್ಧರಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಲವಲವಿಕೆ ಜತೆ ಮಾತನಾಡಿದ್ದಾರೆ.

ನಾಗತಿಹಳ್ಳಿ ಅವರು ಟಗರು ಚಿತ್ರದ ನಂತರ ನನ್ನನ್ನು ಕರೆದು ಸಿನಿಮಾದ ಕಥೆ ಕೊಟ್ಟರು. ಅವರ ಮಗಳೇ ಬರೆದ ಕಥೆ ಅದು. ನನಗೆ ಬಹಳ ಇಷ್ಟವಾಯಿತು. ನನಗೆ ಒಂದು ಟಿಪಿಕಲ್‌ ಲವ್‌ಸ್ಟೋರಿ ಇರೋ ಸಿನಿಮಾದಲ್ಲಿ ನಟಿಸಬೇಕು ಅಂತ ಬಹಳ ಆಸೆ ಇತ್ತು. ಅಂದರೆ ಇಂದಿನ ಜನರೇಷನ್‌ಗೆ ಹೊಂದುವಂಥ ಲವ್‌ ಸ್ಟೋರಿಗೆ ಕಾಯ್ತಿದ್ದೆ. ಈ ಚಿತ್ರದ ಸ್ಕ್ರಿಪ್ಟ್‌ ಹಾಗೇ ಇದೆ. ಬಹಳ ಚೆನ್ನಾಗಿದೆ. ನನಗೆ ಇಂಥ ರೋಲ್‌ ಮಾಡೋಕೆ ಬಹಳ ಖುಷಿ ಆಗ್ತಿದೆ.   

short by Pawan / more at Vijayakarnataka

Comments