Skip to main content


ಅಪೂರ್ವ ಜತೆ ಶರಣ್ ವಿಕ್ಟರಿ

ಶರಣ್ ಸಾಲುಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸದ್ಯ ಅವರ ‘ರ್ಯಾಂಬೋ 2’ ಚಿತ್ರ ಯಶಸ್ಸು ಕಂಡಿದೆ. ಈ ಮಧ್ಯೆ ರಾಗಿಣಿ ದ್ವಿವೇದಿ ಜತೆಗೆ ಅವರೊಂದು ಚಿತ್ರ ಮಾಡುತ್ತಿದ್ದಾರೆ. ಅದರ ಕೆಲಸಗಳು ಬಿರುಸಿನಿಂದ ಸಾಗಿವೆ. ಇದರ ಜತೆಗೆ ‘ಕಾಲೇಜ್ ಕುಮಾರ್’ ಖ್ಯಾತಿಯ ಹರಿ ಸಂತು ನಿರ್ದೇಶನದ ಮುಂದಿನ ಚಿತ್ರದಲ್ಲೂ ಶರಣ್ ಹೀರೋ. ವಿಶೇಷವೆಂದರೆ, ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ‘ಅಪೂರ್ವ’ ಸಿನಿಮಾ ಖ್ಯಾತಿಯ ಅಪೂರ್ವ ನಟಿಸುತ್ತಿದ್ದಾರೆ. ಚಿತ್ರಕ್ಕೆ ‘ವಿಕ್ಟರಿ 2’ ಎಂದು ಶೀರ್ಷಿಕೆ ಫೈನಲ್ ಆಗಿದೆ.

'ಕ್ರೇಜಿ ಸ್ಟಾರ್’ ರವಿಚಂದ್ರನ್ ನಟಿಸಿ, ನಿರ್ದೇಶಿಸಿದ್ದ ‘ಅಪೂರ್ವ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ಅಪೂರ್ವ ಆನಂತರ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಶರಣ್ ಜತೆಗೆ ಡ್ಯುಯೆಟ್ ಹಾಡುವುದಕ್ಕೆ ಸಜ್ಜಾಗಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಹರಿ ಸಂತೋಷ್, ‘ನಮ್ಮ ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ’ ಎನ್ನುತ್ತಾರೆ.     

short by Pawan / more at Vijayavani

Comments