Skip to main content


ಸುದ್ದಿ ಓದುತ್ತಿರುವಾಗಲೇ ಗಳಗಳನೆ ಅತ್ತ ಸುದ್ದಿ ವಾಚಕಿ

ಅಮೆರಿಕದಲ್ಲಿ ಅಕ್ರಮ ವಲಸಿಗರ ಮಕ್ಕಳನ್ನ ಬಾಲಮಂದಿರಕ್ಕೆ ಕಳುಹಿಸುತ್ತಿರುವುದಕ್ಕೆ ಸಂಬಂಧಿಸಿದ ಸುದ್ದಿ ಓದುತ್ತಿರುವಾಗಲೇ ಸುದ್ದಿ ವಾಚಕಿ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದ ಘಟನೆ ಎಂಎಸ್​ಎನ್​ಬಿಸಿ ಟಿವಿಯ ಲೈವ್​ನಲ್ಲಿ ನಡೆದಿದೆ.

ಸುದ್ದಿ ವಾಚಕಿ ರಚೆಲ್ ಮ್ಯಾಡೋ ಕಣ್ಣೀರು ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವಲಸಿಗರ ಮಕ್ಕಳನ್ನ ಅಧಿಕಾರಿಗಳು ಬಾಲಮಂದಿರಕ್ಕೆ ಕಳುಹಿಸುತ್ತಿರುವ ಬಗ್ಗೆ ಸುದ್ದಿ ಓದಲು ಆರಂಭಿಸಿದ ನಿರೂಪಕಿಯ ಕಣ್ಣುಗಳು ಅಕ್ಷರಶಃ ಒದ್ದೆಯಾದವು.ಅಸೋಸಿಯೆಟ್ ಪ್ರೆಸ್ನಿಂದ ಬರುತ್ತಿರುವ ಸುದ್ದಿ ಏನೇಂದರೆ ಎಂದು ಓದಲು ಆರಂಭಿಸಿದ ಆಕೆ ಭಾವೋದ್ವೇಗಕ್ಕೆ ಒಳಗಾಗಿ ಕೆಲ ಸೆಕೆಂಡುಗಳ ಕಾಲ ಕಣ್ಣೀರು ಹಾಕಿದರು. ಮುಂದಿನ ವಅಲಕ್ಯ ಓದಲು ಅವರಿಂದ ಸಾಧ್ಯವಾಗಲೇ ಇಲ್ಲ. ಬಳಿಕ ಬೇರೆಯವರಿಗೆ ಬುಲೆಟಿನ್ ಹಸ್ತಾಂತರ ಮಾಡಿದರು. ಈ ಭಾವನಾತ್ಮಕ ವಿಡಿಯೋ ಲಕ್ಷಾಂತರ ಜನರ ಹೃದಯಕ್ಕೆ ತಟ್ಟಿದೆ.     

short by Pawan / more at News18

Comments