Skip to main content


ನಟಿ ದೀಪಿಕಾ ಪಡುಕೋಣೆ ರಣ್ ವೀರ್ ನನ್ನು ಮದುವೆಯಾಗೋದಿಲ್ಲವಂತೆ !

ಇಡೀ ಬಾಲಿವುಡ್ ಗೆ ಗೊತ್ತಿರುವ ನಂಬಿರುವ ಸತ್ಯವೆಂದರೆ, ಬಾಜಿರಾವ್ ಮಸ್ತಾನಿ,ಜೋಡಿ ರಣ್ ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪರಸ್ಪರ ಡೇಟಿಂಗ್ ನಲ್ಲಿದ್ದಾರೆ. ಈ ಹಿಂದೆ ದೀಪಿಕಾ ಹಾಗೂ ರಣ್ ವೀರ್ ಮದುವೆಯಾಗುತ್ತಾರೆ. ಈ ವರ್ಷಾಂತ್ಯಕ್ಕೆ ಅವರ ವಿವಾಹ ನೆರವೇರಲಿದೆ ಎನ್ನಲಾಗಿತ್ತು., ಅಷ್ಟೇ ಅಲ್ಲದೆ ಮದುವೆ ದಿನಕ್ಕಾಗಿ ಇವರಿಬ್ಬರ ಪೋಷಕರು ಕೂಡ ಪರಸ್ಪರ ಮಾತುಕತೆ ನಡೆಸಿದ್ದರು ಎಂದೇ ಹೇಳಲಾಗಿತ್ತು. ನವೆಂಬರ್ ತಿಂಗಳಲ್ಲಿ ಮದುವೆಯ ದಿನ ಫಿಕ್ಸ್ ಆಗಿದೆ ಎಂದೇ ಎಲ್ಲರು ಹೇಳುತ್ತಿದ್ದರು. ಆದರೆ ಕೆಲದಿನಗಳ ಹಿಂದೆ ಬಂದ ಮಾಹಿತಿಯನ್ವಯ ಇವರಿಬ್ಬರು ಮದುವೆಯಾಗುತ್ತಿಲ್ಲ.

ಮದುವೆಯ ಕುರಿತಂತೆ ತುಂಬಾ ಕನಸು ಕಂಡಿದ್ದ ದೀಪಿಕಾಗೆ ಇದೀಗ ರಣ್ ವೀರ್ ಜೊತೆಗೆ ಮದುವೆಯೆಂಬ ಬಂಧಕ್ಕೆ ಸಿಲುಕಲು ಭಯವಾಗುತ್ತಿದೆಯಂತೆ. ರಣ್ ಬೀರ್ ಕಪೂರ್ ಅವರನ್ನು ಮದುವೆಯಾಗುವುದರ ಬಗೆಗೆ ಅತಿಯಾದ ಕನಸು ಕಂಡಿದ್ದ ದೀಪಿಕಾಗೆ ಅವರೊಂದಿಗೆ ಸಂಬಂಧ ಬ್ರೇಕ್ ಆಪ್ ಆದ ಬಳಿಕ ಮನಸ್ಸು ಅಪ್ಸೆಟ್ ಆಗಿದೆಯಂತೆ. ಹೀಗಾಗಿ ಮದುವೆ ಎಂಬ ಬಂಧ ಆಕೆಯನ್ನು ಭಯಭೀತರನ್ನಾಗಿಸಿದೆ ಎನ್ನಲಾಗಿದೆ.   

short by Pawan / more at Balkani News

Comments