Skip to main content


ಸಿಎಂ ಕುಮಾರಸ್ವಾಮಿ ಜೈಲು ಸೆರೋದು ಖಚಿತ: ಬಿಎಸ್‌ವೈ

ಉಚ್ಚ ನ್ಯಾಯಾಲಯದಲ್ಲಿ ಜಂತಕಲ್‌ ಮೈನಿಂಗ್‌ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಶೀಘ್ರದಲ್ಲಿ ಈ ಪ್ರಕರಣದ ತೀರ್ಪು ಬರಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಜೈಲು ಸೇರುವುದು ಖಚಿತ ಎಂದು ವಿರೋಧ ಪಕ್ಷದ ನಾಯಕ  ಬಿ.ಎಸ್‌. ಯಡಿಯೂರಪ್ಪ ಭವಿಷ್ಯ ನುಡಿದರು. ನಗರದ ಭದ್ರಕಾಳಿ ಸಭಾಂಗಣದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಮತದಾರರು ಹಾಗೂ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಮನೆಗೆ ಹೋಗಲು ಈ ಪ್ರಕರಣ ಸಾಕು. ಅದಲ್ಲದೆ ಕುಮಾರಸ್ವಾಮಿ, ದೇವೇಗೌಡರ ಅನೇಕ ಪ್ರಕರಣಗಳು ನನ್ನ ಬಳಿ ಇದ್ದು, ಸಂದರ್ಭ ಬಂದಾಗ ಅದನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದರು.

Courtesy: Udayavani

Comments