Skip to main content


ಭಯಾನಕವಾಗಿದೆ ದಿ ನನ್‌ ಚಿತ್ರದ ಟ್ರೈಲರ್‌!

ಹಾಲಿವುಡ್‌ನ ಬಹುನಿರೀಕ್ಷಿತ 'ದಿ ನನ್‌' ಚಿತ್ರದ ಮೊದಲ ಟ್ರೈಲರ್‌ ರಿಲೀಸ್ ಆಗಿದೆ. ಒಂದೂವರೆ ನಿಮಿಷದಷ್ಟಿರುವ ಈ ಟ್ರೈಲರ್‌ ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಇದೊಂದು ಹಾರರ್‌ ಚಿತ್ರವಾಗಿದ್ದು, ಟ್ರೈಲರ್ ಮೂಲಕ ತೀವ್ರ ಕುತೂಹಲ ಮೂಡಿಸಿದೆ. ಇದು ಕಂಜ್ಯೂರಿಂಗ್‌ 2 ಚಿತ್ರದ ಮುಂದುವರೆದ ಭಾಗವಾಗಿದೆ. ಕಾರ್ಡಿನ್ ಹಾರ್ಡಿ ಎಂಬುವರು ದಿ ನನ್‌ ಚಿತ್ರವನ್ನು ನಿರ್ದೇಶಿಸಿದ್ದು, ವಾನ್‌ ಚಿತ್ರಕಥೆ ಬರೆಯುವುದರ ಜತೆ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 17 ರಂದು ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.   

short by Pawan!


Comments