Skip to main content


ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಅವರು ಮತ್ತೆ ಚಿತ್ರರಂಗಕ್ಕೆ ಮರಳುತ್ತಾರಾ?? ರಕ್ಷಿತ್ ಶೆಟ್ಟಿ ಅವರಿಗೆ ರಮ್ಯ ಹೇಳಿದ್ದೇನು?

ಸ್ಯಾಂಡಲ್ ವುಡ್ ನಲ್ಲಿ ಮಿಂಚಿ ಮರೆಯದ ಅದೆಷ್ಟೋ ತಾರೆಯರ ನಡುವೆ ಸದಾ ಮಿಂಚುವ ಒಂದು ಹೆಸರು ಎಂದರೇ ಅದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರದ್ದು ಹೌದು ಅವರು ಚಿತ್ರಗಳಲ್ಲಿ ನಟಿಸುವುದನ್ನ ಬಿಟ್ಟು ರಾಜಕೀಯದಲ್ಲಿ ಸಕ್ರಿಯವಾಗಿದ್ದರು ಅವರನ್ನ ಮರೆಯಲು ಯಾರಿಂದಲೂ ಆಗುತ್ತಿಲ್ಲಾ,

ರಕ್ಷಿತ್ ಶೆಟ್ಟಿ ಅವರ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ನೋಡಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಅದನ್ನ ಮೆಚ್ಚಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ ಇದಕ್ಕೆ ಉತ್ತರವಾಗಿ ರಕ್ಷಿತ್ ಶೆಟ್ಟಿ ಅವರು ಧನ್ಯವಾದಗಳನ್ನ ತಿಳಿಸಿ ನೀವು ಯಾವಾಗಲೂ ಸ್ಯಾಂಡಲ್ ವುಡ್ ಕ್ವೀನ್ ಎಂದು ಮತ್ತೆ ನಿಮ್ಮನ್ನ ಬೆಳ್ಳಿತೆರೆಮೇಲೆ ನೋಡುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಮತ್ತೆ ರಮ್ಯಾ ಅವರು ಉತ್ತರ ನೀಡುತ್ತಾ 2019 ನಂತರ ಎಂಬ ಟ್ವಿಟ್ ಮಾಡಿದ್ದಾರೆ ಇದು ಎಲ್ಲರಲ್ಲೂ ಬಹಳಷ್ಟು ಖುಷಿ ತಂದಿದ್ದು ಅದರಲ್ಲೂ ರಮ್ಯಾ ಅಭಿಮಾನಿಗಳಿಗೆ ಹಬ್ಬದ ವಾತಾವರಣದಂತೆ ಸೃಷ್ಟಿಯಾಗಿದೆ.     

Short by Pawan / more at Namtalkies


Comments