Skip to main content


ಪೈಲ್ವಾನ್ ಅಖಾಡದ ಹೈಲೈಟ್ಸ್

ಕೃಷ್ಣ ನಿರ್ದೇಶನದ, ‘ಕಿಚ್ಚ’ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾ ಹಲವು ವಿಚಾರಗಳಿಗೆ ಸದ್ದು ಮಾಡುತ್ತಿದೆ. ಶೀರ್ಷಿಕೆಯಲ್ಲಿಯೇ ಗತ್ತು ಪ್ರದರ್ಶನ ಮಾಡಿರುವ ‘ಪೈಲ್ವಾನ್’ ಚಿತ್ರದ ಮೂಲಕ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕನ್ನಡಕ್ಕೆ ಬಂದಿದ್ದಾರೆ ಎಂಬುದು ಗೊತ್ತೇ ಇದೆ. ಮೊದಮೊದಲು ಚಿತ್ರದಲ್ಲಿ ಅವರದ್ದು ಖಡಕ್ ವಿಲನ್ ಪಾತ್ರ ಎಂದೇ ಹೇಳಲಾಗಿತ್ತು. ಆದರೆ, ಅವರಿಗೆ ಬೇರೆಯದೇ ಗೆಟಪ್ ಚಿತ್ರದಲ್ಲಿರಲಿದೆಯಂತೆ.

‘ಸುನೀಲ್ ಶೆಟ್ಟಿ ಅವರದ್ದು ಪ್ರಮುಖ ಪಾತ್ರ. ಚಿತ್ರದುದ್ದಕ್ಕೂ ಅವರು ಕಾಣಿಸಿಕೊಳ್ಳಲಿದ್ದಾರೆ. ಆದರೆ ವಿಲನ್ ರೀತಿಯಲ್ಲಿ ಅಲ್ಲ. ಖಳಪಾತ್ರದಲ್ಲಿ ಕಬೀರ್ ಖಾನ್, ಶಶಾಂಕ್ ಇದ್ದಾರೆ. ಸುನೀಲ್ ಅವರ ಪಾತ್ರ ತುಂಬ ಸಾಫ್ಟ್ ಆಗಿ ಸಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಕೃಷ್ಣ. ಚಿತ್ರದ ಬಹುತೇಕ ಚಿತ್ರೀಕರಣವನ್ನು ಸೆಟ್​ನಲ್ಲೇ ಶೂಟ್ ಮಾಡುವುದು ನಿರ್ದೇಶಕರ ಪ್ಲಾ್ಯನ್. ಅದರಂತೆ ಬೆಂಗಳೂರು, ಹೈದರಾಬಾದ್​ನಲ್ಲಿ ದೊಡ್ಡ ಮಟ್ಟದ ಸೆಟ್​ಗಳನ್ನು ನಿರ್ವಿುಸಲಾಗುತ್ತಿದೆ.

ಈಗಾಗಲೇ ಚೆನ್ನೈನಲ್ಲಿನ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ, ಮುಂದಿನ ಹಂತದ ಶೂಟಿಂಗ್​ಗಾಗಿ ಹೈದರಾಬಾದ್ ಫ್ಲೈಟ್ ಏರಲಿದೆ. ‘ಸಿನಿಮಾ ಬಗ್ಗೆ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೆಟ್ ಆಗಿದೆ. ಹೊರಾಂಗಣ ಚಿತ್ರೀಕರಣಕ್ಕೆ ಮುಂದಾದರೆ ನೂರಾರು ಜನ ಜಮಾಯಿಸಿಬಿಡುತ್ತಾರೆ. ಆ ಒಂದು ಕಾರಣಕ್ಕೆ ಇಡೀ ಸಿನಿಮಾ ಸೆಟ್​ನಲ್ಲೇ ಚಿತ್ರಿತವಾಗಲಿದೆ’ ಎನ್ನುತ್ತಾರವರು.    

short by Pawan / more at Vijayavani

Comments