Skip to main content


ಕಥೆ ಕೇಳೋದನ್ನೇ ನಿಲ್ಲಿಸಿದ್ದಾರಂತೆ ಆದಿತ್ಯ...ನೋವಿನೊಂದಿಗೆ ಕಠು ಸತ್ಯ ಬಿಚ್ಚಿಟ್ಟ ಡೆಡ್ಲಿ ಸೋಮ

ಆದಿತ್ಯ, ಅಂಡರ್‌ ವರ್ಲ್ಡ್‌ ಚಿತ್ರಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡವರು. ಅವರು ಇತ್ತೀಚಿಗೆ ಕಥೆ ಕೇಳೋದನ್ನೇ ಬಿಟ್ಟಿದ್ದಾರಂತೆ. ಕಥೆ ಹೇಳಲು ಬಂದವರು ಬರೀ ಅಂಡರ್‌ವರ್ಲ್ಡ್‌‌ ಕಥೆನೇ ಹೇಳುತ್ತಾರೆ. ಇದರಿಂದ ಬೇಸತ್ತು ಹೋಗಿದ್ದೇನೆ. ಹೀಗಾಗಿ ಕಥೆ ಕೇಳೋದನ್ನೆ ನಿಲ್ಲಿಸಿಬಿಟ್ಟಿದ್ದೇನೆ. ಕನ್ನಡಕ್ಕೆ ಹೊಸತನವಿರುವ ಚಿತ್ರಗಳು ಬೇಕಾಗಿವೆ ಎಂದು ಅವರು ಹೇಳಿದ್ದಾರೆ. ಇಂದು ಲೈಫ್‌ ಜತೆ ಒಂದು ಸೆಲ್ಫಿ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ರು. ಸ್ಯಾಂಡಲ್‌‌ವುಡ್‌ಗೆ ಇಂತಹ ಚಿತ್ರಗಳ ಅವಶ್ಯಕತೆ ಇದೆ. ದಿನಕರ್ ತುಗೂದೀಪ ಹೊಸ ಪ್ರಯತ್ನ ಮಾಡಿದ್ದಾರೆ. ಈ ರೀತಿಯ ವಿಭಿನ್ನ ಕಥಾಹಂದರವಿರುವ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕು ಎಂದು ಆದಿತ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ರು.      

short by Pawan / more at Eenadu India

Comments