Skip to main content


ಗ್ರಾಹಕರಿಗೆ ಶಾಕಿಂಗ್ ನ್ಯೂಸ್ : ಸಿಲಿಂಡರ್ ಬೆಲೆಯಲ್ಲಿ ಭಾರಿ ಹೆಚ್ಚಳ!

ಸತತವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ಸುದ್ದಿ, ಸಬ್ಸಿಡಿ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಸಬ್ಸಿಡಿ ಎಪ್ ಪಿಜಿಗೆ 2.34 ರೂ. ಹಾಗೂ ಸಬ್ಸಿಡಿ ರಹಿತ ಎಪ್ ಪಿಜಿಗೆ 48 ರೂ. ಏರಿಕೆಯಾಗಿದೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ 14 ಕೆಜಿ ಸಬ್ಸಿಡಿ ಸಿಲಿಂಡರ್ ಬೆಲೆ 493.55 ರೂ. ಸಬ್ಸಿಡಿ ರಹಿತ ಸಿಲಿಂಡರ್ ದರ 698.50 ರೂ. ಆಗಿದೆ. ಅದೇ ರೀತಿ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಸಬ್ಸಿಡಿ ಸಿಲಿಂಡರ್ ಬೆಲೆ ಕ್ರಮವಾಗಿ 481.84 ರೂ. 491.31 ರೂ. ಹಾಗೂ 496.65 ರೂ. ಆಗಿದೆ.     

short by Pawan/ more at Kannada News Now

Comments