Skip to main content


ಶರತ್ ಮಡಿವಾಳ ಕೊಲೆ ಪ್ರಕರಣ: ಆರೋಪಿಗೆ ಜಾಮೀನು

ಕರಾವಳಿಯನ್ನೇ ಸಂಚಲನ ಮೂಡಿಸಿದ ಬಂಟ್ವಾಳ ಶರತ್ ಮಡಿವಾಳ ಕೊಲೆ ಪ್ರಕರಣಗಳಲ್ಲಿ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಷರೀಫ್ ಎಂಬಾತನಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ 18 ಆರೋಪಿಗಳ ಪೈಕಿ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಉಳಿದವರಿಗೆ ಜಾಮೀನು ಸಿಕ್ಕಿದೆ.

ಜೂ.21ರಂದು ಬೆಂಜನಪದವಿನಲ್ಲಿ ಕೊಲೆಯಾದ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕೊಲೆಗೆ ಪ್ರತೀಕಾರವಾಗಿ ಜು. 4ರಂದು ರಾತ್ರಿ 9.30ಕ್ಕೆ ಬಿ.ಸಿ.ರೋಡಿನಲ್ಲಿ ದುಷ್ಕರ್ಮಿಗಳಿಂದ ಶರತ್ ಮಡಿವಾಳನಿಗೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಜು. 7ರಂದು ಬೆಳಗ್ಗಿನ ಜಾವ 12.30ಕ್ಕೆ ಶರತ್ ಮೃತಪಟ್ಟಿದ್ದ. ಇದಾದ ಬಳಿಕ ಜು.8ರಂದು ಎ.ಜೆ. ಆಸ್ಪತ್ರೆಯಿಂದ ಶವಯಾತ್ರೆ ಶವಸಾಗಾಟ ಮಾಡುತ್ತಿದ್ದ ವೇಳೆ ಬಿ.ಸಿ.ರೋಡಿನಲ್ಲಿ ಕಲ್ಲು ತೂರಾಟ, ಗಲಭೆ ನಡೆದಿತ್ತು. ಗಲಭೆ ಸಂಬಂಧಿಸಿ ಐವರನ್ನು ಬಂಧಿಸಲಾಗಿತ್ತು. ಜು.15ರಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿಯ ವಿಚಾರಣೆ ನಡೆದಿತ್ತು.   

short by Pawan / more at Vijayakarnataka

Comments