Skip to main content


ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಓಪನ್ ಬುಕ್ ಎಕ್ಸಾಮ್ ಜಾರಿ?

ಸದ್ಯದ ಪ್ರಾಥಮಿಕ ಶಿಕ್ಷಣದ ಪರೀಕ್ಷಾ ಪದ್ಧತಿ (ಕ್ಲೋಸ್ಡ್ ಬುಕ್ ಎಕ್ಸಾಮ್) ಅವೈಜ್ಞಾನಿವಾಗಿದೆ. ಹೀಗಾಗಿ ಮಕ್ಕಳು ನೇರವಾಗಿ ಪುಸ್ತಕ ತೆರೆದು ಪರೀಕ್ಷೆ ಬರೆಯುವ ಪದ್ಧತಿ (ಓಪನ್ ಬುಕ್ ಎಕ್ಸಾಮ್) ಜಾರಿಗೆ ತರಬೇಕಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.  

ಭಾನುವಾರ ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು ಇದೇ ವೇಳೆ ಅವರು ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳೇ ಕೇಂದ್ರ ಬಿಂದು, ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಶಿಕ್ಷಕರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿ ಈ ವ್ಯವಸ್ಥೆಯನ್ನು ಬದಲಾಯಿಸುತ್ತೇನೆ ಎಂದು ಭರವಸೆ ನೀಡಿದರು.    

short by Pawan / more at Kannada News Now

Comments