Skip to main content


ಸಿನಿಮಾಗಳಿಗೆ ಲಕ್ಕಿ ಅಕ್ಷರವಾದ ಅ

ಕನ್ನಡದ ವರ್ಣಮಾಲೆಯ ಮೊದಲ ಅಕ್ಷರವಾದ 'ಅ' ಅಕ್ಷರವು ಚಿತ್ರರಂಗದಲ್ಲಿ ಅದರಲ್ಲೂ ಹೊಸಬರಿಗೆ ಲಕ್ಕಿ ಅಕ್ಷರವಾಗಿದೆ ಎಂದು ಹೇಳಬಹುದು. ಈ ಅಕ್ಷರದ ಕುರಿತಂತೆ ಕಳೆದ ತಿಂಗಳು ಮುಹೂರ್ತ ಆಚರಿಸಿಕೊಂಡ ಅಮರ್ ಚಿತ್ರದ ಸಂದರ್ಭದಲ್ಲಿ ನಿರ್ದೇಶಕ ನಾಗಶೇಖರ್ ಸಹ ಹೇಳಿಕೊಂಡಿದ್ದರು.

"ಅ'ಕಾರದಿಂದ ಶುರುವಾಗುವ ಹೆಸರುಗಳು ಹೊಸಬರಿಗೆ ಲಕ್ಕಿಯಾಗಿದೆ. "ಅಮರ್' ಸಹ "ಅ'ಕಾರದಿಂದ ಶುರುವಾಗುವುದರಿಂದ, ಚಿತ್ರಕ್ಕೆ ಅದೇ ಹೆಸರನ್ನು ಪಕ್ಕಾ ಮಾಡಲಾಗಿದೆ. ಈ ವಿಷಯದಲ್ಲಿ ನಂಬಿಕೆ ಇಲ್ಲದಿದ್ದರೆ ಇತಿಹಾಸದ ಪುಟಗಳಲ್ಲಿರುವ ಉದಾಹರಣೆಗಳನ್ನು ಗಮನಿಸಿ'. ಧ್ರುವ ಸರ್ಜಾ ಅಭಿನಯದ "ಅದ್ಧೂರಿ' 100 ದಿನಗಳ ಪ್ರದರ್ಶನ ಕಂಡಿತ್ತು.

ಶಿವರಾಜಕುಮಾರ್ ಅವರ ಮೊದಲ ಚಿತ್ರ "ಆನಂದ್' ಸೂಪರ್ ಹಿಟ್ ಆಗಿ 25 ವಾರಗಳ ಪ್ರದರ್ಶನ ಕಂಡಿತ್ತು. ಪುನೀತ್ ರಾಜಕುಮಾರ್ ಅವರ ಮೊದಲ ಚಿತ್ರ "ಅಪ್ಪು' ಸಹ ಸಿಲ್ವರ್ ಜ್ಯೂಬಿಲಿ ಚಿತ್ರವೇ.

ಹೊಸಬರು "ಅ'ಕಾರದಿಂದ ಶುರುವಾಗುವ ಚಿತ್ರಗಳಲ್ಲಿ ಕಾಣಿಸಿಕೊಂಡರೆ, ಅವು ಸೂಪರ್ ಹಿಟ್ ಆಗುತ್ತದೆ ಎಂಬ ನಂಬಿಕೆ ಮತ್ತು ಸೆಂಟಿಮೆಂಟ್ ಇರುವುದರಿಂದ, ಅಭಿಷೇಕ್ ಚಿತ್ರಕ್ಕೆ "ಅ'ಕಾರದಿಂದ ಶುರುವಾಗುವ "ಅಮರ್' ಎಂದು ಹೆಸರಿಡಲಾಗಿದೆ.   

short by Pawan / more at Balkani News

Comments