Skip to main content


ಹಾಸನ-ಮಂಗಳೂರು ರೈಲು ಮಾರ್ಗ ಸಂಚಾರಕ್ಕೆ ಸಿದ್ಧ

ಬೆಂಗಳೂರು-ಮಂಗಳೂರು ನಡುವಿನ ರೈಲು ಸೇವೆ ಇಂದು ಸಂಜೆ ಪುನಃ ಆರಂಭವಾಗಲಿದೆ. ಗುಡ್ಡ ಕುಸಿತಗೊಂಡಿದ್ದರಿಂದ ಸೋಮವಾರ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಭಾರೀ ಮಳೆಯಿಂದಾಗಿ ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಮೂರು ಕಡೆ ಗುಡ್ಡ ಕುಸಿದಿದ್ದು, ಶಿರವಾಗಿಲು ಸೇರಿ ಎರಡು ಕಡೆ ಮರಗಳು ರೈಲು ಹಳಿಯ ಮೇಲೆ ಬಿದ್ದಿದ್ದವು. ಆದ್ದರಿಂದ ಸೋಮವಾರ ಹಾಸನ ಮೂಲಕ ಮಂಗಳೂರಿಗೆ ಸಾಗುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಗಲಿರುವ ಶ್ರಮಿಸಿ ರೈಲು ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ನಿನ್ನೆ ಸಂಜೆಯಿಂದಲೇ ರೈಲು ಸೇವೆ ಪುನಃ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.     

short by Pawan / more at Oneindia

Comments