Skip to main content


ನಟ ಸೃಜನ್ ಲೋಕೇಶ್-ವಿಜಯಲಕ್ಷ್ಮಿ ಮದುವೆ ಮುರಿದು ಬೀಳಲು ಇದೇ ಅಸಲಿ ಕಾರಣ.!

ಕಿರುತೆರೆ ನಟಿ ಗ್ರೀಷ್ಮಾ ರವರನ್ನ ಮದುವೆ ಆಗಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸುಖ ಸಂಸಾರ ನಡೆಸುತ್ತಿದ್ದಾರೆ. ಆದ್ರೆ, ಕೆಲವೇ ಕೆಲವು ವರ್ಷಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ ನಟಿ ವಿಜಯಲಕ್ಷ್ಮಿ ರವರನ್ನ ನಟ ಸೃಜನ್ ಲೋಕೇಶ್ ಮದುವೆ ಆಗಬೇಕಿತ್ತು. ನಟ ಲೋಕೇಶ್-ಗಿರಿಜಾ ಲೋಕೇಶ್ ಪುತ್ರ ಸೃಜನ್ ಹಾಗೂ ನಟಿ ವಿಜಯಲಕ್ಷ್ಮಿ ದಂಪತಿಗಳಾಗಬೇಕಿತ್ತು. ಮೂರು ವರ್ಷಗಳ ಕಾಲ ಸೃಜನ್ ಲೋಕೇಶ್ ಹಾಗೂ ವಿಜಯಲಕ್ಷ್ಮಿ ಪ್ರೀತಿಸಿದ್ದರು. ಇಬ್ಬರು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು.

ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ಇಬ್ಬರ ಮಧ್ಯೆ ಬಿರುಕು ಮೂಡಿತು. ಮದುವೆ ಮುರಿದು ಬಿತ್ತು. ''ಸೃಜನ್ ಲೋಕೇಶ್ ಅವರ ಜೊತೆಗೆ ಎಂಗೇಜ್ ಮೆಂಟ್ ವರೆಗೂ ಬಂತು. ಕೊನೆಗೆ ಸ್ವಲ್ಪ ಮನಸ್ತಾಪ ಆಯ್ತು. ವಿವಾದಗಳು ನನ್ನ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿತು'' - ನಟಿ ವಿಜಯಲಕ್ಷ್ಮಿ

''ನಾನು ಯಾವತ್ತೂ ತಪ್ಪು ದಾರಿ ಹಿಡಿದಿಲ್ಲ. ನಾನು ಇಲ್ಲಿಯವರೆಗೂ ಮದುವೆ ಕೂಡ ಮಾಡಿಕೊಂಡಿಲ್ಲ. ಯಾಕೆ ಅಂದ್ರೆ, ನನ್ನ ಕಣ್ಣ ಮುಂದೆಯೇ ಅಕ್ಕನ ಜೀವನ ಹಾಳಾಗಿರುವಾಗ, ನಾನು ಯಾರನ್ನೋ ಮದುವೆ ಆಗಿ ಹೇಗೆ ಖುಷಿಯಾಗಿರಲಿ.? ನನ್ನ ಅಕ್ಕನ ಜೀವನ ಸರಿಯಾಗುವವರೆಗೂ ನಾನು ನನ್ನ ಜೀವನದಲ್ಲಿ ಯಾರನ್ನೂ ಕರೆದುಕೊಂಡು ಬರಲ್ಲ'' - ನಟಿ ವಿಜಯಲಕ್ಷ್ಮಿ.         

short by Pawan / more at Filmibeat


Comments