Skip to main content


ನಡು ರಸ್ತೆಯಲ್ಲಿ ಬಟ್ಟೆ ಹರಿಯಲು ಬಂದ ಕಾಮುಕನ ಅಟ್ಟಾಡಿಸಿ ಬಡಿದ ಟೆಕ್ಕಿ!

ಕುಂದಲಹಳ್ಳಿಯ ಪಿಜಿಯೊಂದರಲ್ಲಿರುವ 25 ವರ್ಷದ ಐಟಿ ಉದ್ಯೋಗಿಯಾಗಿರುವ ಒಡಿಶಾದ ಭುವನೇಶ್ವರ ಮೂಲದ ಮಹಿಳೆಯೋರ್ವರು ಭಾನುವಾರ ರಾತ್ರಿ ತೋರಿದ ಧೀರತನ, ಇತರರಿಗೆ ಮಾದರಿಯಾಗಿದೆ.

ರಾತ್ರಿ 9.30ರ ಸುಮಾರಿಗೆ ವಾಕಿಂಗ್‌ ಹೋಗಲು ಹೊರಬಂದಿದ್ದ ಮಹಿಳೆಯ ಬಳಿ ಕಟ್ಟಡ ಕಾರ್ಮಿಕ ವಿಜಯ್‌ ಕುಮಾರ್‌ ಅಸಭ್ಯವಾಗಿ ನಡೆದುಕೊಂಡಿದ್ದು, ಆಕೆಯನ್ನು ರಸ್ತೆಗೆ ಬೀಳಿಸಿ, ಬಟ್ಟೆ ಹರಿಯಲು ಮುಂದಾಗಿದ್ದಾನೆ. ಧೃತಿಗೆಡದ ಮಹಿಳೆ, ಕುಮಾರ್‌ಗೆ ಥಳಿಸಿದ್ದಾಳೆ. ಈ ವೇಳೆ ಕುಮಾರ್‌ ಪರಾರಿಯಾಗಲು ಯತ್ನಿಸಿ, ಅಲ್ಲಿಂದ ಓಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ, ಕುಮಾರ್‌ನನ್ನು ಬೆನ್ನಟ್ಟಿದ್ದು, ಸ್ಥಳೀಯರ ಸಹಾಯದೊಂದಿಗೆ ಪೊಲೀಸರಿಗೆ ಒಪ್ಪಿಸಿದ್ದಾಳೆ. 

ಮಾರತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮಧ್ಯಪಾನದ ನಶೆಯಲ್ಲಿ ಏನು ಮಾಡಿದೆನೆಂದು ತಿಳಿದಿಲ್ಲ ಎಂದು ಕುಮಾರ್‌ ವಿಚಾರಣೆ ವೇಳೆ ಪೊಲೀಸರಲ್ಲಿ ಹೇಳಿದ್ದಾನೆ.    

short by Pawan / more at Vijayakarnataka

Comments