Skip to main content


ಪತ್ರಕರ್ತೆ ಗೌರಿಲಂಕೇಶ್ ಹತ್ಯೆಗೈದ ಶಂಕಿತ ಶೂಟರ್ ಅರೆಸ್ಟ್!

ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಶಂಕಿತ ಆರೋಪಿಯನ್ನು ಬಂಧಿಸಿದೆ. ಸಿಂಧಗಿಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತನಾದ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಲಾಗಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ. ಸೋಮವಾರ ಮಹಾರಾಷ್ಟ್ರದಲ್ಲಿ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿದ್ದು, ಮೂರನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಾಗ್ಮೋರೆಯನ್ನು ನೀಡಿದೆ. ಈತ 5 ಅಡಿ ಒಂದು ಇಂಚು ಎತ್ತರ ಹೊಂದಿದ್ದು, 75-80 ಕೆಜಿ ತೂಕವನ್ನು ಹೊಂದಿದ್ದಾನೆ. ಪರಶುರಾಮ್ ಹೇಳಿಕೆ ಆಧರಿಸಿ ಮಂಗಳೂರಿನಲ್ಲಿ ನಿನ್ನೆ ಮತ್ತೊಬ್ಬನನ್ನು ಬಂಧಿಸಲಾಗಿದೆ. ಶಂಕಿತರನ್ನು ಬಂಧಿಸಿದ್ದರೂ ಪಿಸ್ತೂಲ್ ಯಾರ ಬಳಿ ಇದೆ ಎನ್ನುವುದು ತಿಳಿದು ಬಂದಿಲ್ಲ.  

short by Pawan / more at Public Tv

Comments