Skip to main content


ತುರ್ತು ಸ್ಥಿತಿಯಲ್ಲಿ ಗರ್ಭಿಣಿಗೆ ರಕ್ತದಾನ... ಮೂವರ ಜೀವ ಉಳಿಸಿದ್ರು ನಟಿ ಹರಿಪ್ರಿಯಾ!

ಚಂದನವನದ ನಟಿ ಹರಿಪ್ರಿಯಾ ಮಾನವೀಯತೆ ಮೆರೆದಿದ್ದಾರೆ. ರಕ್ತದಾನ ಮಾಡುವ ಮೂಲಕ ಗರ್ಭಿಣಿ ಮಹಿಳೆವೋರ್ವಳ ಜೀವ ಉಳಿಸಿದ್ದಾರೆ.

ಹೌದು, 'ರಕ್ತ ಬೇಕಾಗಿದೆ' ಎನ್ನುವ ಟ್ವೀಟ್‌ ನೋಡಿದ ಅವರು, ಸೀದಾ ಆಸ್ಪತ್ರೆಗೆ ಧಾವಿಸಿ ರಕ್ತದಾನ ಮಾಡಿದ್ದಾರೆ. ಹೆರಿಗೆಯ ಸಮಯದಲ್ಲಿ ರಕ್ತದ ಕೊರತೆಯಿಂದ ನರಳುತ್ತಿದ್ದ ಗರ್ಭಿಣಿಗೆ ತಮ್ಮ ರಕ್ತದಾನ ಮಾಡುವ ಮೂಲಕ ಆ ಜೀವ ಉಳಿಸಿದ್ದಾರೆ. ಬಳಿಕ ಆ ಮಹಿಳೆಗೆ ಹೆರಿಗೆಯಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.   

short by Pawan / more at Eenadu India


Comments