Skip to main content


ವರ್ಷಾಂತ್ಯಕ್ಕೆ ಅನುಷ್ಕಾ ಮದುವೆ.! ವರ ಯಾರು ಗೊತ್ತಾ?

'ಬಾಹುಬಲಿ' ಚಿತ್ರದ ನಾಯಕಿ ಅನುಷ್ಕಾ ಶೆಟ್ಟಿ ಸದ್ಯ ತೆಲುಗು ಸಿನಿಮಾ 'ಸೈಲೆನ್ಸ್' ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಇತ್ತೀಚಿನ ಸಿನೆಮಾ 'ಭಾಗಮತಿ' ಬಾಕ್ಸಾಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಅನುಷ್ಕಾ ಶೆಟ್ಟಿ ಈ ವರ್ಷಾಂತ್ಯಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆಂದು ಹೇಳಲಾಗುತ್ತಿದೆ. ಅನುಷ್ಕಾ ಶೆಟ್ಟಿಯವರ ತಂದೆ-ತಾಯಿ, ಸೂಕ್ತ ವರನ ತಲಾಷೆಯಲ್ಲಿದ್ದು, ಸದ್ಯ ದೇವರ ದರ್ಶನದಲ್ಲಿ ತಲ್ಲೀನರಾಗಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರ ಅನುಷ್ಕಾ ಅಭಿಮಾನಿಗಳಿಗೆ ಶಾಕ್ ನೀಡಿದ್ದು, 'ಬಾಹುಬಲಿ' ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದು, ವಿವಾಹವಾಗಲಿದ್ದಾರೆಂದು ಭಾವಿಸಿದ್ದರ ಮಧ್ಯೆ, ಈ ಜೋಡಿ ನಾವು ಕೇವಲ ಸ್ನೇಹಿತರು ಮಾತ್ರ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ.     

short by Pawan!

Comments