Skip to main content


'ದಿ ವಿಲನ್' ಸಿನಿಮಾಕ್ಕೆ ಇಂಟರ್ ನ್ಯಾಷನಲ್ ವಾಯ್ಸ್ !

'ದಿ ವಿಲನ್' ಸಿನಿಮಾಗಾಗಿ ಅದೆಷ್ಟು ಅಭಿಮಾನಿಗಳು ಕಾಯ್ತಾ ಇದ್ದಾರೋ ಗೊತ್ತಿಲ್ಲ. ಈಗಾಗ್ಲೆ ಹೆಸರು ಪೋಸ್ಟರ್ ಮೂಲಕವೇ ಸಾಕಷ್ಟು ಟ್ರೆಂಡ್ ಸೃಷ್ಟಿ ಮಾಡಿರೋ ಈ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಇದೀಗ ಈ ಸಿನಿಮಾಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡೋಕೂ ರೆಡಿಯಾಗಿದೆ.

ಹೌದು ಈ ಸಿನಿಮಾ ಚಿತ್ರೀಕರಣ ಪ್ರಾರಂಭವಾದಾಗಿನಿಂದಲೂ ಫಿಲ್ಮ್ ಯಾವಾಗ ರಿಲೀಸ್ ಮಾಡ್ತಿಯಾ ಕಣಣ್ಣೋ ? ವಿಲನ್ ಇದೇ ವರ್ಷ ರಿಲೀಸ್ ಮಾಡ್ತೀರಾ ? ಇನ್ನೂ ಎಷ್ಟು ಕಾಯಿಸ್ತಿಯಾ ಗುರೂ ? ಶಿವಣ್ಣ, ಸುದೀಪ್ ಫ್ಯಾನ್ಸ್ ​​ಗಳು ಹೀಗೆ ನಿರ್ದೇಶಕ ಪ್ರೇಮ್ ​ನ ಪ್ರಶ್ನಿಸ್ತಾನೆ ಇದ್ದಾರೆ. ಯಾಕಂದ್ರೆ, ಕನ್ನಡದ ಫೈರ್ ಬ್ರಾಂಡ್​ 'ದಿ ವಿಲನ್​' ಸಿನಿಮಾದ ಕ್ರೇಜ್​ ದಿನೇ ದಿನೇ ಜಾಸ್ತಿಯಾಗ್ತಾನೇ ಇದೆ.

ಒಂದು ದಿನ ಪೂರ್ತಿ ಸ್ಟುಡಿಯೋದಲ್ಲೇ ಬ್ಯುಸಿಯಾಗಿದ್ದ ಇಬ್ಬರೂ,ಅಂತಾರಾಷ್ಟ್ರೀಯ ಮಟ್ಟದ ಕ್ವಾಲಿಟಿಯಲ್ಲಿ ಕೆಲಸ ಮಾಡಿಸಿದ್ದಾರೆ. ಇದೀಗ, ಚಿತ್ರತಂಡಕ್ಕೆ ಇಂಟರ್ ​ನ್ಯಾಷನಲ್​ ಗಾಯಕನನ್ನೇ ಚಿತ್ರತಂಡಕ್ಕೆ ತಂದಿದ್ದಾರೆ. ಹೌದು, ನೆನ್ನೆಯಷ್ಟೇ ಮುಂಬೈನಲ್ಲಿದ್ದ ಜೋಗಿ ಅಂಡ್ ಜನ್ಯ ಇವತ್ತು ಡೆಲ್ಲಿಯಲ್ಲಿದ್ದಾರೆ. ಆಗ್ಲೇ ಡೆಲ್ಲಿಯಲ್ಲಿ ದಿ ವಿಲನ್‌ ಚಿತ್ರದ ಒಂದು ವಿಶೇಷ ಹಾಡನ್ನ ಹಾಡಿಸಿದ್ದಾರೆ. ಅಸಲಿಗೆ ಯಾರು ಆ ಇಂಟರ್‌ ನ್ಯಾಷನಲ್‌ ಸಿಂಗರ್‌..? ಆ ಹಾಡು ಹೇಗಿರುತ್ತೆ..? ಏನು ಅನ್ನೋ ಎಲ್ಲಾ ಡಿಟೇಲ್ಸ್‌ ನ ಜೋಗಿ ಪ್ರೇಮ್‌ ಮತ್ತು ಅರ್ಜುನ್‌ ಜನ್ಯ ಸದ್ಯದಲ್ಲೇ ರಿವೀಲ್‌ ಮಾಡಲಿದ್ದಾರೆ.    

short by Pawan!

Comments