Skip to main content


ಚಂದನವನಕ್ಕೆ ಡಜನ್ ನಿರ್ದೇಶಕರನ್ನು ಕೊಟ್ಟ "ಕುಂದಾಪುರ"

ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಸಿನಿಮಾ ಪ್ರೀತಿ ಹೆಚ್ಚಾಗುತ್ತಿದೆ. ಅಲ್ಲಿಂದ ಸ್ಯಾಂಡಲ್ ವುಡ್ ಗೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಪರಿಚಯವಾಗುತ್ತಿದ್ದಾರೆ. ಕೆಲವರು ಕೋಸ್ಟಲ್ ವುಡ್ ನಲ್ಲೇ ಗುರುತಿಸಿಕೊಂಡರೆ ಇನ್ನು ಕೆಲವರು ಕನ್ನಡ ಸಿನಿಮಾರಂಗದಲ್ಲಿ ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುತ್ತಿದ್ದಾರೆ.ಸದ್ಯ ಕುಂದಾಪುರ ಒಂದರಿಂದಲೇ ಹತ್ತಕ್ಕೂ ಹೆಚ್ಚು ನಿರ್ದೇಶಕರು ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಸಂಚಲನ ಮೂಡಿಸುತ್ತಿದ್ದಾರೆ. ಕಾಶಿನಾಥ್ ರಿಂದ ಆರಂಭವಾದ ನಿರ್ದೇಶಕರ ಲೆಕ್ಕ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ನಿರ್ದೇಶಕ ಗುರುದತ್ತ್ ಗಾಣಿಗ ಅವರ ವರೆಗೂ ಬಂದು ನಿಂತಿದೆ.

ಕನ್ನಡ ಸಿನಿಮಾರಂಗದಲ್ಲಿ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಮೊಟ್ಟಮೊದಲ ಕುಂದಾಪುರಿದ ನಿರ್ದೇಶಕ ಅಂದರೆ ಕಾಶಿನಾಥ್. ಅವರ ನಂತರ ಕಾಶಿನಾಥ್ ಅವರ ಗರಡಿಯಲ್ಲಿ ಪಳಗಿದ ಅವರ ಶಿಷ್ಯ ಉಪೇಂದ್ರ ಕೂಡ ಕುಂದಾಪುರದವರೇ. ಉಪ್ಪಿ ಚಿತ್ರರಂಗದಲ್ಲಿ ಬೇರೆಯದೇ ಟ್ರೆಂಡ್ ಸೃಷ್ಟಿಸಿದರು. 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಪ್ರಖ್ಯಾತರಾದ ರಿಷಬ್ ಶೆಟ್ಟಿ ಕೂಡ ಕುಂದಾಪುರದವರೇ. 'ಕಿರಿಕ್ ಪಾರ್ಟಿ' ಹಾಗೂ 'ರಿಕ್ಕಿ' ಚಿತ್ರಕ್ಕೂ ಮುನ್ನವೇ ಸಾಕಷ್ಟು ವರ್ಷಗಳಿಂದ ರಿಷಬ್ ಕನ್ನಡ ಚಿತ್ರರಂಗದಲ್ಲೇ ಕೆಲಸ ಮಾಡಿಕೊಂಡಿದ್ದರು.     

short by Pawan / more at Filmibeat